ಹಾಕಿ ಇಂಡಿಯಾ ಆಯ್ಕೆ ಸಮಿತಿಗೆ ಸರ್ದಾರ್‌ಸಿಂಗ್

Update: 2019-01-15 18:56 GMT

ಹೊಸದಿಲ್ಲಿ, ಜ.15: ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ಸಿಂಗ್ ಅವರನ್ನು ಹಾಕಿ ಇಂಡಿಯಾ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಹೆಸರಿಸಲಾಗಿದೆ. 13 ಸದಸ್ಯರನ್ನು ಒಳಗೊಂಡ ಸಮಿತಿಗೆ 1975ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಬಿ.ಪಿ.ಗೋವಿಂದ್ ಮುಖ್ಯಸ್ಥರಾಗಿದ್ದಾರೆ.

2020 ಟೋಕಿಯೊ ಒಲಿಂಪಿಕ್ಸ್‌ವರೆಗೆ ತಂಡದಲ್ಲಿ ಇರಲು ಬಯಸಿದ್ದ ಸರ್ದಾರ್ ಸಿಂಗ್, ಕಳೆದ ವರ್ಷ ಏಶ್ಯನ್ ಗೇಮ್ಸ್‌ನಲ್ಲಿ ಅನುಭವಿಸಿದ ನಿರಾಶೆಯಿಂದಾಗಿ ನಿವೃತ್ತಿ ಘೋಷಿಸಿದ್ದರು. ತಮ್ಮನ್ನು ಆಯ್ಕೆ ಸಮಿತಿಗೆ ನೇಮಿಸಿದ್ದನ್ನು ಅವರು ಖಚಿತಪಡಿಸಿದ್ದಾರೆ.

ಸರ್ದಾರ್‌ಸಿಂಗ್ ಅಲ್ಲದೆ, ಹರ್ಬಿಂದರ್ ಸಿಂಗ್, ಸಯ್ಯದ್ ಅಲಿ, ಎ.ಬಿ. ಸುಬ್ಬಯ್ಯ, ಆರ್.ಪಿ.ಸಿಂಗ್, ರಜನೀಶ್ ಮಿಶ್ರಾ, ಜಾಯ್‌ದೀಪ್ ಕೌರ್, ಸುರೇಂದ್ರ ಕೌರ್, ಅಸುಂತಾ ಲಾಕ್ರಾ, ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್ ಜಾನ್ ಹಾಗೂ ಪುರುಷ ಹಾಗೂ ಮಹಿಳಾ ತಂಡಗಳ ಪ್ರಧಾನ ಕೋಚ್‌ಗಳು ಆಯ್ಕೆ ಸಮಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News