ವಿಶ್ವ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಇಂದ್ರಾ ನೂಯಿ ?

Update: 2019-01-16 07:59 GMT

 ವಾಶಿಂಗ್ಟನ್, ಜ.16: ಭಾರತ ಸಂಜಾತೆ, ಪೆಪ್ಸಿ ಕಂಪೆನಿಯ ಮಾಜಿ ಸಿಇಒ ಇಂದ್ರಾ ನೂಯಿ ಅವರನ್ನು ವರ್ಲ್ಡ್ ಬ್ಯಾಂಕ್‌ನ ನೂತನ ಅಧ್ಯಕ್ಷರನ್ನಾಗಿ ವೈಟ್‌ಹೌಸ್ ಪರಿಗಣಿಸಿದೆ ಎಂದು ಅಮೆರಿಕದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ.

63ರ ಹರೆಯದ ನೂಯಿ ಪೆಪ್ಸಿ ಕಂಪೆನಿಯನ್ನು 12 ವರ್ಷಗಳ ಕಾಲ ಸಿಇಒ ಆಗಿ ಮುನ್ನಡೆಸಿದ ಬಳಿಕ ಕಳೆದ ವರ್ಷದ ಆಗಸ್ಟ್‌ನಲ್ಲಿ ಹುದ್ದೆಯನ್ನು ತೊರೆದಿದ್ದರು.

 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಿರಿಯ ಪುತ್ರಿ ಇವಾಂಕಾ ಟ್ರಂಪ್‌ರೊಂದಿಗೆ ನೂಯಿ ಉತ್ತಮ ಬಾಂಧವ್ಯವಿತ್ತು. ನೂಯಿ ನೇಮಕದ ಹಿಂದೆ ಇವಾಂಕಾ ಪಾತ್ರವಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂತರ್‌ರಾಷ್ಟ್ರೀಯ ವ್ಯವಹಾರದ ಖಜಾಂಚಿ ವಿಭಾಗದ ಅಧಿಕಾರಿ ಡೇವಿಡ್ ಮಲ್ಪಾಸ್ ಹಾಗೂ ಓವರ್‌ಸೀಸ್ ಪ್ರೈವೇಟ್ ಇನ್‌ವೆಸ್ಟ್‌ಮೆಂಟ್ ಕಾರ್ಪ್ ಸಿಇಒ ರೇ ವಾಶ್‌ಬರ್ನ್ ಅವರಿದ್ದಾರೆ ಎಂದು ಆಡಳಿತಾಧಿಕಾರಿ ಮಂಗಳವಾರ ತಿಳಿಸಿದ್ದಾರೆ.

 ಫೆ.1 ರಂದು ಜಿಮ್ ಯಾಂಗ್ ಕಿಮ್ ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತ್ಯಜಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ನೂತನ ಅಧ್ಯಕ್ಷರ ಶೋಧದಲ್ಲಿದ್ದಾರೆ ಎಂದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ ಬಳಿಕ ಈ ಮೂವರ ಹೆಸರು ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News