ರಣಜಿ ಟ್ರೋಫಿ: ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ ಕೇರಳ

Update: 2019-01-17 09:16 GMT

ವಯನಾಡ್, ಜ.17: ಗುಜರಾತ್ ತಂಡವನ್ನು ಭರ್ಜರಿಯಾಗಿ ಮಣಿಸಿದ ಕೇರಳ ತನ್ನ 61 ವರ್ಷಗಳ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿತು.

ಕೃಷ್ಣಗಿರಿ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ ತಂಡ 113 ರನ್‌ಗಳಿಂದ ಜಯ ಸಾಧಿಸಿತು. 3ನೇ ದಿನದಾಟವಾದ ಗುರುವಾರ ಗೆಲ್ಲಲು 195 ರನ್ ಗುರಿ ಪಡೆದ ಗುಜರಾತ್ 2ನೇ ಇನಿಂಗ್ಸ್‌ನಲ್ಲಿ ಕೇವಲ 81 ರನ್‌ಗಳಿಗೆ ಆಲೌಟಾಯಿತು.

ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ ಬಾಸಿಲ್ ಥಾಂಪಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದಿದ್ದ ಥಾಂಪಿ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಗುಚ್ಛ (5-27)ಪಡೆದಿದ್ದರು. ರನ್ ಚೇಸಿಂಗ್ ವೇಳೆ ಗುಜರಾತ್ ಪರ ರಾಹುಲ್ ಶಾ(33 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News