ತಮ್ಮ ವಾರ್ಷಿಕ ಟಾರ್ಗೆಟ್ ತಲುಪದ ಉದ್ಯೋಗಿಗಳಿಗೆ ಚೀನಾದ ಕಂಪೆನಿ ನೀಡುತ್ತಿದೆ ಮುಜುಗರಕಾರಿ ಶಿಕ್ಷೆ !

Update: 2019-01-17 11:52 GMT

ಬೀಜಿಂಗ್, ಜ. 17 : ತಮಗೆ ನಿಗದಿಪಡಿಸಲಾದ ವಾರ್ಷಿಕ ಟಾರ್ಗೆಟ್ ಅಥವಾ ಗುರಿ ತಲುಪದ ಉದ್ಯೋಗಿಗಳನ್ನು ಚೀನಾದ ಕಂಪೆನಿಯೊಂದು ವಿಚಿತ್ರ ರೀತಿಯಲ್ಲಿ ಶಿಕ್ಷಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಮ್ಮ ಟಾರ್ಗೆಟ್ ತಲುಪಲು ವಿಫಲರಾದ ಉದ್ಯೋಗಿಗಳಿಗೆ ಮುಜುಗರಕಾರಿ ಸನ್ನಿವೇಶವನ್ನು ಕಂಪೆನಿ ಸೃಷ್ಟಿಸಿದ್ದು ಅವರೆಲ್ಲರನ್ನೂ ರಸ್ತೆಗಳಲ್ಲಿ ನಾಲ್ಕು ಕಾಲುಗಳಲ್ಲಿ ನಡೆಯುವಂತೆ ಮಾಡಿ ತಮಾಷೆಯ ವಸ್ತುವನ್ನಾಗಿಸಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ ಕಂಪೆನಿಯ ಅಧಿಕಾರಿಯೊಬ್ಬನ ಉಸ್ತುವಾರಿಯಲ್ಲಿ ಉದ್ಯೋಗಿಗಳು ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯವನ್ನು ದಾರಿಹೋಕರು  ಅಚ್ಚರಿಯಿಂದ ನೋಡುತ್ತಿರುವುದು ಕಾಣಿಸುತ್ತದೆ. ಅಂತಿಮವಾಗಿ ಪೊಲೀಸರು ಕಂಪೆನಿಯ ಈ ಅಮಾನವೀಯ ಶಿಕ್ಷೆ ನೀಡುವ ಪದ್ಧತಿಗೆ ಅಂತ್ಯ ಹಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆಗಿದ್ದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಸಾಮಾಜಿಕ ತಾಣಗಳಲ್ಲಿಯೂ ಹಲವರು ಕಂಪೆನಿಯ ಈ ಪದ್ಧತಿಯನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News