ಜ.19: ಯೋಧ-ನಮನ ಕಾರ್ಯಕ್ರಮ

Update: 2019-01-18 16:41 GMT

ಬೆಂಗಳೂರು, ಜ.18: ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜ.19 ರಂದು ಸಂಜೆ 4 ಗಂಟೆಗೆ ಜಯನಗರದ ಎಚ್.ಎಸ್ ಕಲಾಕ್ಷೇತ್ರದಲ್ಲಿ ಯೋಧ-ನಮನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಲ್ ಎ.ಎಸ್.ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಡಿಜಿಪಿ ಭಾಸ್ಕರ್ ರಾವ್, ಪ್ಲೈಟ್ ಲೆಫ್ಟಿನೆಂಟ್ ಕೆ.ಪಿ ನಾಗೇಶ್, ನಾಡೋಜ ಮಹೇಶ್ ಜೋಷಿ ಮುಂತಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.

ಯುದ್ಧಭೂಮಿಯಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸಿ, ಐದು ಬಡ ಯೋಧರ ಕುಂಟುಂಬಕ್ಕೆ ತಲಾ 50,000 ರೂ.ಗಳನ್ನು ಹಲವು ಜನರ ಸಹಕಾರದಿಂದ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿ ಪ್ರತಿಷ್ಠಾನ ಗೌರವಾರ್ಪಣೆ ಮೂಲಕ ನೀಡಲಾಗುವುದು ಎಂದರು.

ಶಿವಾನಂದ ಬಸಪ್ಪ ಮಾತೋಡಿ(ಬೈಲಹೊಂಗಲ), ಸಿದ್ದಪ್ಪ ಕುಂಬಾರ(ಬಾಗಲಕೋಟೆ), ಸಂದೀಪ್ ಶೆಟ್ಟಿ(ಹಾಸನ), ವೇದರಾಜ್(ಬಳ್ಳಾರಿ), ಉಮೇಶ್ ಹೆಳವರ್(ಬೆಳಗಾಂ) ಕುಟುಂಬದವರಿಗೆ ಸಹಾಯ ಹಣ ನೀಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News