ರಾಬರ್ಟ್ ವಾದ್ರಾ ಬಂಟನ ಬಂಧನಕ್ಕೆ ತಡೆಯಾಜ್ಞೆ ಫೆ.6ರವರೆಗೆ ವಿಸ್ತರಣೆ

Update: 2019-01-19 14:31 GMT

ಹೊಸದಿಲ್ಲಿ,ಜ.19: ಅಕ್ರಮ ಹಣ ವಹಿವಾಟು ಪ್ರಕರಣವೊಂದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಬಂಟ ಮನೋಜ್ ಅರೋರಾ ಬಂಧನದ ವಿರುದ್ಧ ಮಧ್ಯಂತರ ತಡೆಯಾಜ್ಞೆಯನ್ನು ಶನಿವಾರ ದಿಲ್ಲಿಯ ವಿಶೇಷ ನ್ಯಾಯಾಲಯವು ಫೆಬ್ರವರಿ 6ರವರೆಗೆ ವಿಸ್ತರಿಸಿದೆ.

ಅರೋರಾ ಶುಕ್ರವಾರ ತನಿಖೆಗೆ ಹಾಜರಾಗಿದ್ದು,ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ವಿಶೇಷ ಸರಕಾರಿ ಅಭಿಯೋಜಕ ಡಿ.ಪಿ.ಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಪ್ರಕರಣವು ಲಂಡನ್‌ನಲ್ಲಿರುವ ವಾದ್ರಾ ಒಡೆತನದ್ದೆಂದು ಹೇಳಲಾಗಿರುವ 19 ಲಕ್ಷ ಪೌಂಡ್ ಮೌಲ್ಯದ ಆಸ್ತಿಯ ಖರೀದಿಗಾಗಿ ಅಕ್ರಮ ಹಣ ವಹಿವಾಟಿಗೆ ಸಂಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News