ಅಪಘಾತರಹಿತ ವಾಹನ ಚಾಲನೆ: 283 ಮಂದಿ ಕೆಎಸ್ಸಾರ್ಟಿಸಿ ಚಾಲಕರಿಗೆ ಬೆಳ್ಳಿ ಪದಕ

Update: 2019-01-19 16:32 GMT

ಬೆಂಗಳೂರು, ಜ. 19: ಅಪಘಾತ ಮತ್ತು ಅಪರಾಧಹಿರತ ವಾಹನ ಚಾಲನೆ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ 283 ಮಂದಿ ಸಂಸ್ಥೆಯ ಚಾಲಕರಿಗೆ ಗಣರಾಜ್ಯೋತ್ಸ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಅಪಘಾತರಹಿತ ಮತ್ತು ಅಪರಾಧರಹಿತವಾಗಿ 5 ವರ್ಷಗಳ ಸೇವೆ ಸಲ್ಲಿಸಿದ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕರಿಗೆ ಸುರಕ್ಷಾ ಚಾಲಕ ಎಂಬ ಬಿರುದು ನೀಡಿ, ‘ಗಂಡಭೇರುಂಡ ಲಾಂಛನ’ವುಳ್ಳ 32 ಗ್ರಾಂ ಬೆಳ್ಳಿ ಪದಕ, 2 ಸಾವಿರ ರೂ. ನಗದು ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಮುಂದಿನ ದಿನಗಳಲ್ಲಿ ಚಾಲಕರು ಅಪಘಾತವೆಸಗದಂತೆ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹಿಸಲು ಮಾಸಿಕ 50ರೂ.ಪ್ರೋತ್ಸಾಹ ಭತ್ತೆಯನ್ನು ನೀಡಲಾಗುತ್ತಿದೆ. ಸಂಸ್ಥೆ ಪ್ರತಿನಿತ್ಯ 8750 ಬಸ್ಸುಗಳಿಂದ, 28.95 ಲಕ್ಷ ಕಿ.ಮೀ ಕಾರ್ಯಾಚರಣೆ ಮಾಡುತ್ತಿದ್ದು, 29ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು(ಕೇಂದ್ರೀಯ)-32, ರಾಮನಗರ-17, ತುಮಕೂರು-10, ಕೋಲಾರ-62, ಚಿಕ್ಕಬಳ್ಳಾಪುರ-23, ಮೈಸೂರು ನಗರ-1, ಮೈಸೂರು ಗ್ರಾಮಾಂತರ-12, ಮಂಡ್ಯ-13, ಚಾಮರಾಜನಗರ-12, ಹಾಸನ-24, ಚಿಕ್ಕಮಗಳೂರು-11, ಮಂಗಳೂರು-6, ಪುತ್ತೂರು-15, ದಾವಣಗೆರೆ-26, ಶಿವಮೊಗ್ಗ-11, ಕೆಂಪೇಗೌಡ ಬಸ್ ನಿಲ್ದಾಣ-2, ಕೇಂದ್ರ ಕಚೇರಿ-6 ಸೇರಿ ಒಟ್ಟು 283ಮಂದಿ ಆಯ್ಕೆಯಾಗಿದ್ದಾರೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News