ಯುವ ವಕೀಲೆ ಧರಣಿ ಸಾವು ಪ್ರಕರಣ: ತನಿಖಾಧಿಕಾರಿಯೇ ಬರಲಿ; ಕೋರ್ಟ್

Update: 2019-01-19 17:27 GMT

ಬೆಂಗಳೂರು, ಜ.19: ಯುವ ವಕೀಲೆ ಧರಣಿ ಸಾವು ಪ್ರಕರಣ ಸಂಬಂಧ ತನಿಖಾಧಿಕಾರಿ ಖುದ್ದು ಹಾಜರಾಗುವಂತೆ ನಗರದ 71ನೇ ಸಿವಿಲ್ ಕೋರ್ಟ್ ಹೆಚ್ಚುವರಿ ನ್ಯಾಯಾಧೀಶ ಮೋಹನ್ ಪ್ರಭು ನಿರ್ದೇಶಿಸಿದರು.

ಧರಣಿ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಬಿಎಂಪಿ ವಿ.ಸುರೇಶ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನಡೆಯಿತು.

ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶರು, ಈ ಪ್ರಕರಣದ ವಿವರಣೆ ನೀಡಲು ಪ್ರಕರಣದ ತನಿಖಾಧಿಕಾರಿಯೂ ಆದ ಮಹದೇವಪುರ ವಿಭಾಗದ ಎಸಿಪಿ ಕೋರ್ಟ್‌ಗೆ ಹಾಜರಾಗುವಂತೆ ನಿರ್ದೇಶಿಸಿದರು. ಬಳಿಕ, ವಿಚಾರಣೆಯನ್ನು ಸೋಮವಾರಕ್ಕೆ(ಜ.21) ಮುಂದೂಡಿದರು ಎಂದು ತಿಳಿದುಬಂದಿದೆ.

 ಪ್ರಕರಣದ ಹಿನ್ನಲೆ: ವಕೀಲೆ ಧರಣಿ ಅವರು 2018ರ ಡಿ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು ವರ್ಷಗಳಿಂದ ಧರಣಿ ವಾಸವಿದ್ದ ಮನೆಯನ್ನು ಕಬಳಿಸಲು ಸ್ಥಳೀಯ ಪಾಲಿಕೆ ಸದಸ್ಯ ವಿ.ಸುರೇಶ್ ಹಾಗೂ ಅವರ ಸಹಚರರು ಕೊಲೆ ಬೆದರಿಕೆ ಹಾಕಿದ್ದ ಕಾರಣ ಧರಣಿ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಧರಣಿ ಪರ ದೂರು ನೀಡಿರುವವರ ಆರೋಪ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News