ಅಲ್ ಖಾದಿಸ ಎಜುಕೇಷನಲ್ ಅಕಾಡಮಿ ಕಾವಲ್ಕಟ್ಟೆ ಕತರ್ ರಾಷ್ಟ್ರೀಯ ಸಮಿತಿ : ರಹಮ್ ಕಾನ್ಫರೆನ್ಸ್- 2019

Update: 2019-01-20 05:15 GMT

ದೋಹಾ, ಜ. 20: ಅಲ್ ಖಾದಿಸ ಎಜುಕೇಷನಲ್ ಅಕಾಡೆಮಿ ಕಾವಲ್ಕಟ್ಟೆ ಕತರ್ ರಾಷ್ಟ್ರೀಯ ಸಮಿತಿ ವತಿಯಿಂದ ದೋಹಾ ದಲ್ಲಿ ರಹಂ ಕಾನ್ಫರೆನ್ಸ್ 2019 ಕಾರ್ಯಕ್ರಮ ನಡೆಯಿತು.

ಕೆ ಸಿ ಎಫ್ ಕತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ರಹೀಮ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಸ್ತುತ ಅಲ್ ಖಾದಿಸ ಕತರ್ ಸಮಿತಿ ಅಧ್ಯಕ್ಷ ಕಬೀರ್ ದೇರಳಕಟ್ಟೆ ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯದರ್ಶಿ ಸಾದಿಕ್ ಮೂಳೂರ್ ಸ್ವಾಗತಿಸಿದರು.

ಅಲ್ ಖಾದಿಸ ಎಜುಕೇಷನಲ್ ಅಕಾಡಮಿಯ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಮಾತನಾಡಿ ಶೈಕ್ಷಣಿಕ ಹಾಗೂ ಸಾಂತ್ವನ ಕ್ಷೇತ್ರಗಳಲ್ಲಿ ನಮಗಿರುವ ಜವಾಬ್ದಾರಿಗಳನ್ನು ವಿವರಿಸಿದರು. ಅಲ್  ಖಾದಿಸದೊಂದಿಗೆ ಕೈಜೋಡಿಸಿ ಕತರ್ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಿರುವ ಸಹಾಯ ಸಹಕಾರಗಳನ್ನು ಶ್ಲಾಘಿಸಿದರು.

ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಎಸ್  ಎಸ್ ಎಫ್ ನ ಪ್ರಧಾನ ಕಾರ್ಯದರ್ಶಿ, ಹಾಫಿಲ್  ಸುಫಿಯಾನ್ ಸಖಾಫಿ  ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಬಹಳ ಶೋಚನೀಯ ಪರಿಸ್ಥಿತಿಯಲ್ಲಿರುವ ಮುಗ್ಧ ಕುಟುಂಬ ಗಳತ್ತ ಕಾರುಣ್ಯದ ಹಸ್ತ ಚಾಚುವಲ್ಲಿ  ಕೇವಲ ಹೃಸ್ವ ಸಮಯದಲ್ಲಿ  ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮಾಡಿರುವ  ಸಾಧನೆ ಗಳನ್ನು ಹಾಫಿಲ್  ಸುಫಿಯಾನ್ ಸಖಾಫಿ ವಿವರಿಸಿದರು.

ಈ ಸಂದರ್ಭ ದಲ್ಲಿ 2019 - 20 ನೇ ಸಾಲಿಗೆ ನೇಮಕಗೊಂಡ ಪದಾಧಿಕಾರಿಗಳ ಹೆಸರುಗಳನ್ನೂ ಪ್ರಕಟಿಸಲಾಯಿತು. ಇದರಂತೆ ಕಬೀರ್ ದೇರಳಕಟ್ಟೆಯವರು ಅಧ್ಯಕ್ಷರಾಗಿ ಹಾಗೂ ಸಾದಿಕ್ ಮೂಳೂರ್ ಕಾರ್ಯದರ್ಶಿಗಳಾಗಿ ಮುಂದುವರಿಯಲಿದ್ದು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಿಮಾನ್ ಪುಂಜಾಲಕಟ್ಟೆ, ಇಕ್ಬಾಲ್ ಪುಂಜಾಲಕಟ್ಟೆ, ಜತೆ ಕಾರ್ಯದರ್ಶಿಗಳಾಗಿ ಹಸನ್ ಪುಂಜಾಲಕಟ್ಟೆ, ಅಬ್ದುಸ್ಸತ್ತಾರ್ ಅಶ್ರಫಿ ಮಠ ಹಾಗೂ ಖಜಾಂಜಿ ಯಾಗಿ ಮುಹಮ್ಮದ್ ಪುಂಜಾಲಕಟ್ಟೆ ಇವರನ್ನು ನೇಮಿಸಲಾಯಿತು.

ಹಜ್ರತ್ ಡಾ. ಮುಹಮ್ಮದ್ ಫಾಝಿಲ್ ರಝಿ ಸಮಿತಿಯ ಪ್ರಧಾನ ನಿರ್ದೇಶಕರಾಗಿದ್ದು, ಸಲಹಾ  ಸಮಿತಿ ಸದಸ್ಯರಾಗಿ  ಹಾಫಿಲ್ ಫಾರೂಕ್  ಸಖಾಫಿ ರಹೀಮ್ ಸಅದಿ,  ಇಸಾಕ್ ನಿಝಮಿ,  ಇಸ್ಮಾಯಿಲ್  ಪಿ  ಎಚ್  ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ  ಅಶ್ರಫ್, ಕಬೀರ್ ಮಡಿಕೇರಿ, ಖಾದರ್ ಕರೋಪಾಡಿ, ಅಂದುಮಾನ್ ನಾವುಂದ,  ಫಾರೂಕ್ ಕಾಯರ್ತಡ್ಕ, ಸಿದ್ದಿಕ್ ಕೃಷ್ಣಾಪುರ, ಖಲೀಲ್ ಕಟ್ಟೆಮಾರ್ ಇವರುಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News