ಧೋನಿ ಈಗಲೂ ವಿಶ್ವ ಶ್ರೇಷ್ಠ ಮ್ಯಾಚ್ ಫಿನಿಶರ್: ಇಯಾನ್ ಚಾಪೆಲ್

Update: 2019-01-20 18:34 GMT

ಹೊಸದಿಲ್ಲಿ, ಜ.20: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ‘ಮ್ಯಾಚ್ ಫಿನಿಶಿಂಗ್’ ರೀತಿ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೀಗ ಅವರ ಮ್ಯಾಚ್ ಫಿನಿಶಿಂಗ್ ಶಕ್ತಿ ಕುಂದುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆಯಾಗುತ್ತಿದ್ದು, ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್, ಧೋನಿ ಅವರನ್ನು ಹೊಗಳಿ, ಧೋನಿ ಈಗಲೂ ಏಕದಿನ ಪಂದ್ಯಗಳ ಶ್ರೇಷ್ಠ ಫಿನಿಶರ್ ಎಂದು ಹೇಳಿದ್ದಾರೆ.

ಕ್ರಿಕೆಟ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಧೋನಿ ಅವರ ತಾಳ್ಮೆ ಹಾಗೂ ಧೈರ್ಯವನ್ನು ಕೊಂಡಾಡಿದ್ದಾರೆ. ‘‘ಪಂದ್ಯವನ್ನು ಗೆಲುವಿನಲ್ಲಿ ಮುಗಿಸುವ ಸಾಮರ್ಥ್ಯ ಧೋನಿ ಅವರಿಗೆ ದಕ್ಕಿದಂತೆ ಯಾರಿಗೂ ದಕ್ಕಿಲ್ಲ. ಅವರು(ಧೋನಿ)ಪಂದ್ಯ ಮುಗಿಸಲು ಬಹಳ ಸಮಯ ತೆಗೆದುಕೊಂಡರು ಎಂದು ನಾನು ಬಹಳ ಸಲ ಅಂದುಕೊಂಡದ್ದಿದೆ. ಆದರೆ ಪಂದ್ಯವನ್ನು ರೋಮಾಂಚಕತೆಯೆಡೆಗೆ ಒಯ್ದು ಗೆಲುವಿನಲ್ಲಿ ಪರಿವರ್ತಿಸುವ ರೀತಿಯಿಂದ ಅಚ್ಚರಿಗೊಂಡಿದ್ದೇನೆ’’ ಎಂದು ಹೇಳಿದ್ದಾರೆ ಚಾಪೆಲ್.

ಧೋನಿಯನ್ನು ಆಸ್ಟ್ರೇಲಿಯದ ಮಾಜಿ ಆಟಗಾರ ಅತ್ಯುತ್ತಮ ಫಿನಿಶರ್ ಎಂದು ಹೆಸರಾದ ಮೈಕೆಲ್ ಬೆವೆನ್ ಅವರೊಂದಿಗೆ ಹೋಲಿಸುತ್ತಾ, ‘‘ಬೆವೆನ್ ಅವರನ್ನೂ ಧೋನಿ ಮೀರಿಸಿದ್ದಾರೆ ಎಂದು ಚಾಪೆಲ್ ಹೇಳಿದ್ದಾರೆ. ಬೆವೆನ್ ಬೌಂಡರಿಗಳಲ್ಲಿ ಪಂದ್ಯವನ್ನು ಮುಗಿಸುತ್ತಿದ್ದರೆ, ಧೋನಿ ಸಿಕ್ಸರ್‌ಗಳಲ್ಲಿ ಮುಗಿಸುತ್ತಾರೆ’’ಎಂದಿದ್ದಾರೆ ಚಾಪೆಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News