ಶಿವಕುಮಾರ ಸ್ವಾಮೀಜಿ ನಿಧನ: ಸಚಿವೆ ಡಾ.ಜಯಮಾಲಾ ಸಂತಾಪ

Update: 2019-01-21 16:00 GMT

ಬೆಂಗಳೂರು, ಜ.21: ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದ್ದ ಮಹಾನ್ ಚೇತನ, ಮಾನವತಾವಾದಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಇಂದು ನಿಧನರಾಗಿರುವುದು ನಮ್ಮೆಲ್ಲರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಶೋಕ ವ್ಯಕ್ತಪಡಿಸಿದ್ದಾರೆ.

‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದ ಶ್ರೀಗಳು ತಮ್ಮ ತಪಸ್ ಶಕ್ತಿಯಿಂದ ಇಂದಿನ ದಿನಮಾನದಲ್ಲಿ ದೈವಶಕ್ತಿ ಹೊಂದಿದ್ದು ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರೇರಣೆ ನೀಡುತ್ತಿದ್ದರು. ಆದರೆ, ಅವರ ಚಿಂತನೆಗಳಿಗೆ, ಉಪದೇಶಗಳಿಗೆ, ಅವರ ಸೇವೆಗೆ ಎಂದಿಗೂ ಸಾವಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ಷರ ದಾಸೋಹ, ಅನ್ನ ದಾಸೋಹ ಮತ್ತು ಜ್ಞಾನ ದಾಸೋಹವನ್ನು ನಿರಂತರವಾಗಿ ಕೈಗೊಂಡು ಇಡೀ ಜಗತ್ತಿನಲ್ಲಿ ಶ್ರೀಗಳು ಗುರುವಾಗಿದ್ದರು. ಸದಾ ಭಕ್ತರಿಗೆ ದಾರಿ ದೀಪವಾಗಿದ್ದ ಶ್ರೀಗಳು ಶಿವೈಕ್ಯರಾಗಿರುವ ಈ ಸಂದರ್ಭದಲ್ಲಿ ನಾನು ಮತ್ತೊಮ್ಮೆ ಅವರಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸ ಬಯಸುತ್ತೇನೆ. ಪೂಜ್ಯ ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸುವ ಮೂಲಕ ಗೌರವ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಯಮಾಲಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News