ಖಾಸಗಿ ಬಸ್‌ಗಳ ಹಾವಳಿ ತಡೆಗೆ ಕ್ರಮ: ಮೂರು ಬಸ್ ಟರ್ಮಿನಲ್ ನಿರ್ಮಾಣಕ್ಕೆ ಚಿಂತನೆ

Update: 2019-01-21 16:44 GMT

ಬೆಂಗಳೂರು, ಜ.19: ನಗರದಲ್ಲಿ ದಿನದಿಂದ ದಿನಕ್ಕೆ ಖಾಸಗಿ ಬಸ್‌ಗಳ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ವಿವಿಧ ಕಡೆಗಳಲ್ಲಿ ಬಸ್ ಟರ್ಮಿನಲ್ ನಿರ್ಮಿಸಲು ಮುಂದಾಗಿದೆ.

ಹಲವು ಬಾರಿ ಖಾಸಗಿ ಬಸ್ ಮಾಲಕರಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಸ್ತೆಯ ಪಕ್ಕದಲ್ಲಿಯೇ ಬಸ್‌ಗಳ ನಿಲ್ದಾಣ ಮಾಡಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪರಿಪಾಠವನ್ನು ಬಿಡುತ್ತಿಲ್ಲ. ಹೀಗಾಗಿ ನಗರದೊಳಗೆ ಖಾಸಗಿ ಬಸ್‌ಗಳ ಪ್ರವೇಶ ನಿರ್ಬಂಧಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

ಅದರಂತೆ ಸಾರಿಗೆ ಇಲಾಖೆಯು ಬೆಂಗಳೂರು ಹೊರ ವಲಯದಲ್ಲಿ ಮೂರು ಕಡೆ ಖಾಸಗಿ ವಾಹನ ನಿಲುಗಡೆಗೆ ಅವಕಾಶ ನೀಡಲು ನಿರ್ಧರಿಸಿದೆ. ನಗರದ ಸಿಲ್ಕ್ ಬೋರ್ಡ್, ಪೀಣ್ಯ ಹಾಗೂ ಬೈಯಪ್ಪನಹಳ್ಳಿಯಲ್ಲಿ ಬಸ್ ಟರ್ಮಿನಲ್ ನಿರ್ಮಿಸಲು ಮುಂದಾಗಿದೆ. ಈಗಾಗಲೇ ರಸ್ತೆ, ಬಸ್ ಮಾರ್ಗಗಳ ಕುರಿತು ಸಮೀಕ್ಷೆ ನಡೆಸುತ್ತಿದ್ದು ಜನವರಿ ಅಂತ್ಯದೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಹಾಗೆಯೇ ಸರಕಾರದ ಮುಖ್ಯ ಕಾರ್ಯದರ್ಶಿ ಸಾರಿಗೆ ಇಲಾಖೆ ಹಾಗೂ ಮೆಟ್ರೋ ನಿಗಮಕ್ಕೆ ಬೈಯಪ್ಪನಹಳ್ಳಿ, ಸಿಲ್ಕ್ ಬೋರ್ಡ್ ಬಳಿ ಸರಕಾರದ ಎಷ್ಟು ವಿಸ್ತೀರ್ಣದ ಖಾಲಿ ಜಾಗವಿದೆ ಎಂದು ತಿಳಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News