ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಗ್ರಾಹಕ ಹಕ್ಕುಗಳ ವೇದಿಕೆ ಅಸ್ತಿತ್ವಕ್ಕೆ

Update: 2019-01-21 17:18 GMT

ಬೆಂಗಳೂರು, ಜ.21: ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಗ್ರಾಹಕ ಹಕ್ಕುಗಳ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ನವೀನ್ ಅಗರವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲ್‌ಗಳು, ಟ್ರೆಂಡಿಂಗ್ ಕಂಪೆನಿಗಳು, ಬಜಾರ್‌ಗಳು ಸೇರಿದಂತೆ ಹಲವು ಅಂಗಡಿಗಳಲ್ಲಿ ಗ್ರಾಹಕರು ಕೊಂಡುಕೊಳ್ಳುವ ಪದಾರ್ಥಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಗುಣಮಟ್ಟದ ಪದಾರ್ಥಗಳೆಂದು ನಂಬಿಸಿ ಮೋಸ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಹೆಚ್ಚು ಹಣ ಪಡೆದು ಕಳಪೆ ವಸ್ತುಗಳನ್ನು ನೀಡುತ್ತಿರುವ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.

ದೇಶದಾದ್ಯಂತ 500ಕ್ಕೂ ಹೆಚ್ಚು ಸದಸ್ಯರಿದ್ದು, ರಾಜ್ಯದಲ್ಲಿ 150 ಸದಸ್ಯರು ವೇದಿಕೆಯ ಸದಸ್ಯತ್ವ ಪಡೆದಿದ್ದಾರೆ. ಗ್ರಾಹಕರ ಹಕ್ಕುಗಳನ್ನು ಪ್ರತಿಪಾದಿಸುವ ಹಾಗೂ ಸಮಸ್ಯೆಗಳ ನಿರ್ವಹಣೆ ಮಾಡಲು ವೇದಿಕೆ ಸಿದ್ಧವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 97998 73495 ಅನ್ನು ಸಂಪರ್ಕಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News