ವೈಮಾನಿಕ ಪ್ರದರ್ಶನ: ವಿಮಾನ ಟೇಕ್ ಆಫ್‌ಗೆ ಕೆರೆ ಹಿನ್ನೀರು ಬಳಕೆ

Update: 2019-01-21 18:24 GMT

ಬೆಂಗಳೂರು, ಜ.21: ಅಂತರ್‌ಚಾಷ್ಟ್ರೀಯ ವೈಮಾನಿಕ ಪ್ರದರ್ಶನ ಫೆ.20 ರಿಂದ ಆರಂಭವಾಗಲಿದ್ದು ಆಕರ್ಷಣೀಯ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ವಿಮಾನ ಟೇಕ್ ಆಫ್ ಆಗಲು ರನ್ ವೇ ಬದಲು ಕೆರೆ ಹಿನ್ನೀರಿನ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಯಲಹಂಕದಲ್ಲಿರುವ ಭಾರತೀಯ ವಾಯುನೆಲೆಯಲ್ಲಿ ಐದು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. ದೇಶ-ವಿದೇಶದ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಸಹಕಾರಿಯಾಗಲಿದೆ.

ವೈಮಾನಿಕ ಪ್ರದರ್ಶನ ಬೆಳಗ್ಗೆ 10-12 ಗಂಟೆ, ಮಧ್ಯಾಹ್ನ 2ರಿಂದ 5 ರವರೆಗೆ ನಡೆಯಲಿದೆ. ಏರೋ ಇಂಡಿಯಾದಲ್ಲಿ ಸಾರಂಗ್, ಸೂರ್ಯಕಿರಣ್, ರಫೇಲ್, ಅಡ್ವಾನ್ಸ್ ಲಘು ಹೆಲಿಕಾಪ್ಟರ್, ತೇಜಸ್, ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಸ್ವದೇಶಿ ವಿಮಾನ ಸಾರಸ್ ಪಿಟಿ1ಎನ್, ಎಂಐ-17, ಸುಖೋಯ್ 30 ಎಂಕೆಐ, ಅಂಟನೋವಾ 132 ಡಿ, ಎಚ್‌ಟಿಟಿ 40 ಸೇರಿ ಒಟ್ಟಾರೆಯಾಗಿ 59 ವಿಮಾನಗಳು ಪ್ರದರ್ಶನದಲ್ಲಿ ಪ್ರದರ್ಶನ ನೀಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News