ವೈದಿಕ ಶಿಕ್ಷಣ ಮಂಡಳಿ ಬರುತ್ತಿದೆ..

Update: 2019-01-22 06:59 GMT

ಮಾನವ ಸಂಪನ್ಮೂಲ ಸಚಿವಾಲಯದ (ಎಂಎಚ್‌ಆರ್‌ಡಿ) ವಿಭಾಗವೆಂದು ವೇದಗಳ ವಿಚಾರಗಳನ್ನಾಧರಿಸಿರುವ ವೇದ ವಿಚಾರ ಕೇಂದ್ರಿತವಾದ ಒಂದು ರಾಷ್ಟ್ರೀಯ ಶಿಕ್ಷಣ ಮಂಡಳಿಗೆ ತಾತ್ವಿಕವಾದ ಒಪ್ಪಿಗೆ ನೀಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ ಭಾರತೀಯ ಶಿಕ್ಷಾ ಬೋರ್ಡ್ (ಬಿಎಸ್‌ಬಿ) ಎಂದು ಕರೆಯಲಾಗುವ ಒಂದು ಹೊಸ ಶಿಕ್ಷಣ ಮಂಡಳಿಯು ‘ವೇದಿಕ್ ಶಿಕ್ಷಣವನ್ನು ಒಂದು ಮಟ್ಟವಾಗಿಸುವ’ (ಸ್ಟ್ಯಾಂಡರ್ಡೈಸಿಂಗ್) ಗುರಿ ಹೊಂದಿರುವ ಮಂಡಳಿಯಾಗಿ ಕಾರ್ಯನಿರ್ವಹಿಸಲಿದೆ. ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಗೆ ಬದಲಿ ಅಂಗವಾಗಿ ಬಿಎಸ್‌ಬಿತನ್ನದೇ ಆದ ಪಠ್ಯಕ್ರಮವನ್ನು ಹೊಂದುವ, ಪರೀಕ್ಷೆಗಳನ್ನು ಎದುರಿಸಿ ಮೌಲ್ಯಮಾಪನ ಮಾಡಿಸಿ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ.

ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿರುವ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು (ಎಂಎಸ್‌ಆರ್‌ವಿಪಿ) ಜನವರಿ 11ರಂದು ಕರೆದ ಸಭೆಯೊಂದರಲ್ಲಿ ಬಿಎಸ್‌ಬಿಯ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು. ಬಿಎಸ್‌ಬಿಯು ವೇದಗಳು ಮತ್ತು ಇತರ ಹಿಂದೂ ಧಾರ್ಮಿಕ ಪಠ್ಯಗಳಲ್ಲಿರುವ ನಂಬಿಕೆಗಳೊಂದಿಗೆ ಭಾರತೀಯ ವಿದ್ವತ್ತನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಕೇಂದ್ರ ಸರಕಾರದ ಒಂದು ಯೋಜನೆಯಾಗಿದೆ. ಭಾರತದ ಶಾಲೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರಾಚೀನ ಪರಂಪರೆ, ಸಂಸ್ಕೃತಿಯ ವಿಕಾಸ ಮತ್ತು ವಿಜ್ಞಾನದ ಹಲವು ಮೂಲಗಳನ್ನು ತಿಳಿಸುವುದರಿಂದ ನಾವು ಪಡೆಯುವ ಲಾಭ ಬಹಳಷ್ಟಿದೆ. ಆದರೆ ಇದನ್ನು ಕಾರ್ಯಗತಗೊಳಿಸುವ ಹಾದಿಯಲ್ಲಿ ನರೇಂದ್ರ ಮೋದಿ ಸರಕಾರವು ಒಂದು ಮಿತಿಯನ್ನು ಮೀರಿ ಹೋಗುತ್ತಿದೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಪುರಾವೆ ಇದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತನ್ನ ತಾರತಮ್ಯ ನೀತಿಗಳನು,್ನ ಧೋರಣೆಗಳನ್ನು ಚಿತ್ರಿಸಲಿಕ್ಕಾಗಿ ಇತಿಹಾಸ ಪುಸ್ತಕಗಳನ್ನು ಬದಲಿಸಿದರೆ ಪರವಾಗಿಲ್ಲ ಎಂಬುದನ್ನು ಅದು ಈಗಾಗಲೇ ತೋರಿಸಿಕೊಟ್ಟಿದೆ. ಇದನ್ನೆಲ್ಲ ಗಮನಿಸುವಾಗ ಬಿಎಸ್‌ಬಿಯು ಅಪಾಯಕಾರಿಯಾಗಿ ಕಾಣಿಸುತ್ತದೆ.

ಬಿಎಸ್‌ಬಿ ನಡೆಸಲಿರುವ ಶಾಲೆಗಳು, ಸಂಸ್ಥೆಗಳು ನಡೆಸಬೇಕೆಂದು ನಿರೀಕ್ಷಿಸಲಾಗಿರುವ ಕೆಲವು ತರಗತಿಗಳನ್ನು ಈಗಾಗಲೇ ಹಲವು ಸಂಸ್ಥೆಗಳು ನಡೆಸುತ್ತಿವೆ. 2016ರಲ್ಲಿ ಸ್ವತಃ ಎಂಎಸ್‌ಆರ್‌ವಿಪಿ ದೇಶದಲ್ಲಿ 83 ವೇದಪಾಠ ಶಾಲೆಗಳಿಗೆ ಆರ್ಥಿಕ ನೆರವು ನೀಡಿತ್ತು. ಆ ಶಾಲೆಗಳಲ್ಲಿ 462 ಶಿಕ್ಷಕರು ಮತ್ತು 3,020 ವಿದ್ಯಾರ್ಥಿಗಳು ಇದ್ದರು. ಅದೇ ವೇಳೆ ದೇಶದಲ್ಲಿ ದ್ವಿತೀಯ ಗರಿಷ್ಠ ಸಂಖ್ಯೆಯ (971)ಪಿಎಚ್‌ಡಿ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ವಿದ್ಯಾರ್ಥಿಗಳಾಗಿದ್ದರು. 2017ರಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಭಾರತೀಯ ಭಾಷೆಗಳಲ್ಲಿ ತೃತೀಯ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು (26,886) ಸಂಸ್ಕೃತ ಭಾಷೆಯ ವಿದ್ಯಾರ್ಥಿಗಳಾಗಿದ್ದರು. ಪರಿಸ್ಥಿತಿ ಹೀಗಿರುವಾಗ ವೇದಗಳು ಸೇರಿದಂತೆ ಸಂಸ್ಕೃತ ಪಠ್ಯಗಳ ಅಧ್ಯಯನಕ್ಕೆ ಶಾಲೆಗಳಲ್ಲಿ ಪ್ರೋತ್ಸಾಹ ನೀಡುವುದು ಸ್ವಾಗತಾರ್ಹವೇ. ಆದರೆ ಇದು ವಿದ್ಯಾರ್ಥಿಗಳನ್ನು ಕೆಟ್ಟ ವಿದ್ವತ್ತಿನಡೆಗೆ ಒಯ್ಯಬಾರದು. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರವನ್ನು ಆಯ್ದುಕೊಳ್ಳಲು ಅದು ಅವರಿಗೆ ತರುವ ವೈಯಕ್ತಿಕ ಸ್ವಾತಂತ್ರ್ಯ, ಬಡತನ ಮತ್ತು ಸಾಂಪ್ರದಾಯಿಕ ಮನೆ ವಾರ್ತೆಗಳಿಂದ ನೀಡುವ ಬಿಡುಗಡೆಗೆ ಕಾರಣವೆಂದು ವರದಿಗಳು ಹೇಳುತ್ತವೆ.

ಬಿಎಸ್‌ಬಿ ಇಂತಹ ಶಿಕ್ಷಣಕ್ಕೆ ನೀಡುವ ಸಂಪನ್ಮೂಲಗಳನ್ನು ಇತರ ಕಡೆಗೆ ವ್ಯಯಿಸುವ ಒಂದು ವ್ಯವಸ್ಥೆಯಾಗಬಾರದು. ಬಿಎಸ್‌ಬಿ ‘ವೇದಿಕ್ ಮತ್ತು ಆಧುನಿಕ ಶಿಕ್ಷಣ’ವನ್ನು ಬೆರೆಸುವ ಹೊಸ ಬಗೆಯ ಶಾಲೆಗಳನ್ನು ಸೃಷ್ಟಿಸಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ವರದಿ ಹೇಳಿದೆ.
ಈ ಶಾಲೆಗಳಲ್ಲಿ ವೇದಗಳನ್ನು ಹಾಗೂ ಸಂಸ್ಕೃತವನ್ನು ‘ಮೇಜರ್’ ವಿಷಯಗಳಾಗಿ ಮತ್ತು ಆಧುನಿಕ ವಿಷಯಗಳನ್ನು ‘ಮೈನರ್’ ವಿಷಯಗಳಾಗಿ ತಿಳಿದುಕೊಳ್ಳಬಹುದು.

ಆದರೆ ಬಿಎಸ್‌ಬಿಯ ವೇದಗಳಿಗೆ ಒತ್ತು ನೀಡುವ ಕುರಿತು ತಕರಾರು ಏನೆಂದರೆ, ವೇದಗಳು ಈಗಾಗಲೇ ಲಭ್ಯವಿವೆ. ಅವುಗಳನ್ನು ಅರ್ಥ ಮಾಡಿಕೊಳ್ಳಲಾಗಿದೆ ಮತ್ತು ವ್ಯಾಪಕವಾಗಿ ಅವುಗಳ ಅಧ್ಯಯನ ನಡೆದಿದೆ. ಹೀಗಿರುವಾಗ ಬಿಎಸ್‌ಬಿಯ ಮೇಲೆ ಕೋಟಿಗಟ್ಟಲೆ ಹಣ ವ್ಯಯಿಸುವ ಅಗತ್ಯವಿದೆಯೇ? ಅಲ್ಲದೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವಿದೆ ಎಂದರೆ ಬಿಎಸ್‌ಬಿಮತ್ತು ಅದರ ಮಾನ್ಯತೆ ಪಡೆದಿರುವ ಸಂಸ್ಥೆಗಳು ತಮ್ಮ ಬೋಧನಾ ಗುರಿಗಳು ಹುಸಿ ರಾಷ್ಟ್ರವಾದಿ ಮಹತ್ವಾಕಾಂಕ್ಷಿಗಳಿಗೆ ಬಲಿಯಾಗುವುದಿಲ್ಲ ಎಂಬ ಖಾತರಿಯನ್ನು ನೀಡಬೇಕು. ಇಂತಹ ಖಾತರಿ ರಾಜಕೀಯ ಕಾರಣಗಳಿಗಾಗಿಯೂ ಬಹಳ ಮುಖ್ಯವಾಗುತ್ತದೆ.

ಸರಕಾರ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಈಗ ತುಂಬಾ ಕ್ಷುಲ್ಲಕವಾಗಿ ಕಾಣಿಸಬಹುದು. ಆದರೆ ನಾವು ಈ ವ್ಯತ್ಯಾಸವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಮುಂದೆ ಒಂದು ದಿನ ಹಿಂದುತ್ವವು ಭಾರತೀಯ ರಾಜಕಾರಣದ ಮೇಲಿರುವ ತನ್ನ ಹಿಡಿತವನ್ನು ಕಳೆದುಕೊಳ್ಳಬಹುದು. ಆಗ ವೇದಗಳ ಜ್ಞಾನದ ಸುತ್ತ ಸರಕಾರ ಕಟ್ಟಿರುವ ಗೌರವವಾದ ಸಂಸ್ಕೃತಿಯ ಅಡಿಪಾಯ ಕುಸಿಯಬಹುದು. ಹಾಗಾದಾಗ ಅದು ಅಥವಾ ಆಗ ಇರುವ ಸರಕಾರ ಬಿಎಸ್‌ಬಿಯನ್ನು ತನ್ನ ಜೊತೆ ಕೆಳಕ್ಕೆ ಒಯ್ಯಬಾರದು. ಒಯ್ಯುವಂತಾಗಬಾರದು ಈ ಖಾತರಿಯಷ್ಟೇ ಅಲ್ಲದೆ, ನಿಗದಿತ ಅವಧಿಗೆ ನಡೆಯುವ ಲೆಕ್ಕ ಪರಿಶೋಧನೆಗಳು ಸೇರಿದಂತೆ ಬಿಎಸ್‌ಬಿಯ ಪದವೀಧರರು ಯಾವಾಗಲೂ ಉದ್ಯೋಗಗಳಿಗೆ ನೇಮಕಗೊಳ್ಳಲು ಅರ್ಹವಾಗಿರುವಂತೆ, ಎಂಪ್ಲಾಯೆಬಲ್ ಆಗಿರುವಂತೆ ನೋಡಿಕೊಳ್ಳಬೇಕು.
ಅಂದರೆ ಯಾವುದೇ ಶೈಕ್ಷಣಿಕ ಮಂಡಳಿಯ ಪಠ್ಯ ಪುಸ್ತಕಗಳ ವಿಷಯದಲ್ಲಿ ಮೂಗು ತೂರಿಸದೇ ಇರುವುದು ತನ್ನ ರಾಜಕೀಯ ಸಿದ್ಧಾಂತಗಳಿಗೆ ಬೇಕಾದಂತೆ ಪಠ್ಯಗಳನ್ನು ತಿರುಚದೆ ಇರುವುದು.

ಶೈಕ್ಷಣಿಕ ಪ್ರಮಾಣೀಕರಣದ ಒಂದು ಹೊಸ ವ್ಯವಸ್ಥೆಯನ್ನು ಸ್ಥಾಪಿಸು ವುದೆಂದರೆ ಕೇವಲ ಕಾಗದ ಪತ್ರಗಳ ಮೇಲೆ ರುಜು ಮಾಡುವುದು ಅಷ್ಟೇ ಅಲ್ಲ. ಮೊಹರು ಒತ್ತುವುದು, ತರಗತಿ ಕೋಣೆಗಳನ್ನು ನಿರ್ಮಿಸುವುದು, ಶುಲ್ಕ ನಿಗದಿಪಡಿಸುವುದು ಮತ್ತು ಶಿಕ್ಷಕರ ನೇಮಕಾತಿ ಮಾಡುವುದು ಅಷ್ಟೇ ಅಲ್ಲ. ಬದಲಾಗಿ, ನಮ್ಮ ವಿದ್ಯಾರ್ಥಿಗಳು ಸತತವಾಗಿ ಲಾಭಗಳನ್ನು ಪಡೆಯಲು ಸಾಧ್ಯವಾಗುವಂತಹ ಇನ್ನಷ್ಟು ವ್ಯಾಪಕವಾದ ಅರ್ಥವ್ಯವಸ್ಥೆಯನ್ನು ಸೃಷ್ಟಿಸುವುದು.


ಕೃಪೆ: thewire

Writer - ವಾಸುದೇವನ್ ಮುಕುಂದ್

contributor

Editor - ವಾಸುದೇವನ್ ಮುಕುಂದ್

contributor

Similar News