ನಿಜ ಶರಣನ ಹಾದಿ

Update: 2019-01-22 05:26 GMT

ಶಿವಕುಮಾರ ಸ್ವಾಮೀಜಿ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅಸಂಖ್ಯಾತ ಭಕ್ತ ವೃಂದಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

ರಹೀಂ ಖಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ

**************************

ಬಾಲ್ಯದಿಂದಲೇ ವಿರಕ್ತಿ ಮಾರ್ಗವನ್ನು ಅನುಸರಿಸಿ, ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು- ಅಂತೆಯೇ ಸಮಾಜ ಮತ್ತು ದೇಶದ ಕಲ್ಯಾಣಕ್ಕಾಗಿ ಅವರು ದೇಹವನ್ನು ಕೊರಡಿನಂತೆ ಸವೆಸಿದರು. ಧಾರ್ಮಿಕ ಹಿನ್ನೆಲೆಯ ವ್ಯಕ್ತಿಯಾಗಿದ್ದರೂ ಅವರಲ್ಲಿ ದೇಶಭಕ್ತಿ ಆಳವಾಗಿ ನೆಲೆಯೂರಿತ್ತು.

ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ

**************************

ಡಾ. ಸಿದ್ಧಗಂಗಾ ಸ್ವಾಮೀಜಿಯವರು ಮೂರು ಶತಮಾನಗಳ ಅಧ್ಯಾತ್ಮ ಪರಂಪರೆಯ ಕೊಂಡಿಯಾಗಿದ್ದರು. ಧರ್ಮ, ಅಧ್ಯಾತ್ಮ, ಸಮಾಜ ಸೇವೆಗಳ ಸಮನ್ವಯವನ್ನು ತೋರ್ಪಡಿಸಿಕೊಟ್ಟಿದ್ದರು. ಓರ್ವ ವಿರಕ್ತ ಹೇಗಿರಬೇಕು, ಗುರು ಶಿಷ್ಯರ ನಡುವಿನ ಬಾಂಧವ್ಯ ಹೇಗಿರಬೇಕೆಂಬುದಕ್ಕೆ ಬಹುದೊಡ್ಡ ಮಾದರಿಯಾಗಿದ್ದರು.

ಮರುಳಸಿದ್ದ ಸ್ವಾಮೀಜಿ, ಬಸವ ಕೇಂದ್ರ ಶಿವಮೊಗ್ಗ

**************************

ಮಹಾನ್ ಮಾನವತಾವಾದಿ ಡಾ. ಶ್ರೀ ಶಿವಕುಮಾರಸ್ವಾಮಿ ನಿಧನ ನಾಡಿಗೆ ಅಪಾರ ನಷ್ಟವನ್ನುಂಟುಮಾಡಿದೆ. ಜೀವಮಾನದ ಕೊನೆಯ ಘಳಿಗೆಯವರೆಗೂ ತಮ್ಮ ಸೇವಾ ತತ್ಪರತೆಯನ್ನು ಪಾಲಿಸಿದ್ದಾರೆ. ಈ ಮಹಾ ಪುರುಷರ ಬದುಕು ಮಾನವ ಕುಲಕ್ಕೆ ಮಾದರಿ.

ತನ್ವೀರ್ ಸೇಠ್, ಶಾಸಕ

**************************

ಶ್ರೀಗಳು ಕಾಯಕವೇ ಕೈಲಾಸ ಎನ್ನುವ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ವಿದ್ಯೆ, ವಸತಿ ನೀಡುತ್ತಿದ್ದರು. ಸಮಾಜದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಶ್ರೀಗಳು ನಿಧನರಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟ.

ಧರ್ಮಸೇನಾ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News