ಎಫ್‌ಐಎಚ್ ಸರಣಿ ಫೈನಲ್ಸ್: ಸುಲಭದ ಗುಂಪಿನಲ್ಲಿ ಭಾರತ

Update: 2019-01-21 18:52 GMT

ಲೌಸನ್ನೆ(ಸ್ವಿಟ್ಝರ್ಲೆಂಡ್), ಜ.21: 2020 ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮುಂಚಿನ ಟೂರ್ನಿಗಳಾದ ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟದ(ಎಫ್‌ಐಎಚ್) ಸರಣಿ ಫೈನಲ್ಸ್ ಗಳಿಗೆ ಡ್ರಾ ಪ್ರಕಟಿಸಲಾಗಿದೆ. ಭಾರತ ತಂಡ ಸುಲಭದ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭುವನೇಶ್ವರದಲ್ಲಿ ಜೂ.6ರಿಂದ 16ರವರೆಗೆ ಭಾರತದ ಪಂದ್ಯಗಳು ನಡೆಯಲಿವೆ.

ಈ ವರ್ಷದ ಎಪ್ರಿಲ್ ಮತ್ತು ಜೂನ್ ಮಧ್ಯೆ ನಡೆಯಲಿರುವ ಆರು ಫೈನಲ್ಸ್‌ಗಳ ಗುಂಪುಗಳ ಸಂಯೋಜನೆಯನ್ನು ಎಫ್‌ಐಎಚ್ ದೃಢಪಡಿಸಿದೆ.

‘‘ಎಫ್‌ಐಎಚ್ ಸರಣಿ ಫೈನಲ್ಸ್‌ಗಳು ಒಲಿಂಪಿಕ್ಸ್ ಗೇಮ್ಸ್‌ಗೆ ಅರ್ಹತೆ ಪಡೆಯುವ ದಾರಿಯಾಗಿವೆ. ವಾಸ್ತವವಾಗಿ ಪ್ರತಿ ಗುಂಪಿನ ಅಗ್ರ ಎರಡು ಗುಂಪುಗಳು ಟೋಕಿಯೊ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಯಲ್ಲಿ ಸ್ಥಾನ ಪಡೆಯಲಿವೆ. ಅಕ್ಟೋಬರ್ ಹಾಗೂ ನವೆಂಬರ್ 2019ರಲ್ಲಿ ಈ ಟೂರ್ನಿಗಳು ನಡೆಯಲಿವೆ’’ ಎಂದು ಎಫ್‌ಐಎಚ್ ಬಿಡುಗಡೆ ಮಾಡಿರುವ ಪ್ರಕಟನೆ ತಿಳಿಸಿದೆ.

ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ಹೊರತುಪಡಿಸಿ ಯಾವುದೇ ತಂಡಗಳು ತವರು ತಂಡ ಭಾರತಕ್ಕೆ ಸವಾಲಾಗುವ ಸಾಧ್ಯತೆ ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಭಾರತ, ಜಪಾನ್‌ನ್ನು ಹೊರತುಪಡಿಸಿ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಮೆಕ್ಸಿಕೊ, ಪೋಲೆಂಡ್, ರಶ್ಯ, ದ.ಆಫ್ರಿಕ, ಅಮೆರಿಕ ಹಾಗೂ ಉಝ್ಬೇಕಿಸ್ತಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News