ಐಸಿಸಿ ಟೆಸ್ಟ್, ಏಕದಿನ, ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಕೊಹ್ಲಿ

Update: 2019-01-22 07:51 GMT

ಹೊಸದಿಲ್ಲಿ, ಜ.22: ಐಸಿಸಿ ವರ್ಷದ ಕ್ರಿಕೆಟಿಗನಾಗಿ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ, ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಮತ್ತು ಐಸಿಸಿ ಏಕದಿನ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಈ ಸಾಧನೆ ಮಾಡಿದ ಪ್ರಪ್ರಥಮ ಕ್ರಿಕೆಟಿಗನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.

ವಿರಾಟ್ ಕೊಹ್ಲಿ ಅವರು ಐಸಿಸಿ ವರ್ಷದ ಕ್ರಿಕೆಟಿಗನಾಗಿ ಸತತ ಎರಡನೇ ಬಾರಿ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಡೆದಿದ್ದಾರೆ. 2017 ಮತ್ತು 2018ರಲ್ಲಿ ಈ ಪ್ರಶಸ್ತಿ ಪಡೆದಿದ್ದಾರೆ. ಐಸಿಸಿ ಟೆಸ್ಟ್ , ಏಕದಿನ  ಮತ್ತು ಐಸಿಸಿ ವರ್ಷದ ಕ್ರಿಕೆಟ್ ಪ್ರಶಸ್ತಿಯನ್ನು ಬಾಚಿಕೊಂಡ ವಿಶ್ವದ ಮೊದಲ ಕ್ರಿಕೆಟಿಗ  ಆಟಗಾರ ಎನಿಸಿಕೊಂಡಿದ್ದಾರೆ.

ಕೊಹ್ಲಿ 2012, 2017 ಮತ್ತು 2018ನೇ ಸಾಲಿನ  ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.

2018ರ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.  ಕೊಹ್ಲಿ 2012,2014, 2012,  2014ರಲ್ಲಿ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದಿದ್ದ ಕೊಹ್ಲಿ 2016, 2017 ಮತ್ತು 2018ರಲ್ಲಿ ತಂಡದ ನಾಯಕರಾಗಿದ್ದರು.

2017 ಮತ್ತು 2018ರಲ್ಲಿ ಐಸಿಸಿ ಟೆಸ್ಟ್ ತಂಡದ ನಾಯಕತ್ವದ ಗೌರವ ಪಡೆದಿದ್ದಾರೆ.

ಕೊಹ್ಲಿ ಕಳೆದ ವರ್ಷ 13 ಟೆಸ್ಟ್ ಗಳಲ್ಲಿ 55.08 ಸರಾಸರಿಯಂತೆ 5 ಶತಕಗಳನ್ನು ಒಳಗೊಂಡ 1,322 ರನ್ ಗಳಿಸಿದ್ದಾರೆ.  ಹದಿನಾಲ್ಕು ಏಕದಿನ ಪಂದ್ಯಗಳಲ್ಲಿ 133. 55 ಸರಾಸರಿಯಂತೆ 1,202 ರನ್ ಮತ್ತು 6 ಶತಕ ದಾಖಲಿಸಿದ್ದಾರೆ. 10 ಟ್ವೆಂಟಿ-20 ಪಂದ್ಯಗಳಲ್ಲಿ 211 ರನ್  ಗಳಿಸಿದ್ದಾರೆ.

ಕೊಹ್ಲಿ ನಾಯಕರಾಗಿ ಐಸಿಸಿ ಟೆಸ್ಟ್ ತಂಡದಲ್ಲಿ ಭಾರತದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಜಸ್ ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.

ಕೊಹ್ಲಿ ನಾಯಕತ್ವದ ಏಕದಿನ ತಂಡದಲ್ಲಿ ರೋಹಿತ್ ಶರ್ಮಾ, ಕುಲ್ ದೀಪ್ ಯಾದವ್ ಮತ್ತು ಜಸ್ ಪ್ರೀತ್ ಬುಮ್ರಾ ಸ್ಥಾನ ಪಡೆದಿರುವ ಭಾರತದ  ಸಹ  ಆಟಗಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News