ಗಾಂಜಾ ಗಿಡದ ಬೀಜ ಮಾರಾಟ: ವಿದೇಶಿ ಪ್ರಜೆ ಬಂಧನ

Update: 2019-01-22 16:58 GMT

ಬೆಂಗಳೂರು, ಜ.22: ಮಾದಕ ವಸ್ತು ಗಾಂಜಾ ಗಿಡದ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಯೋರ್ವನನ್ನು ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೂಡಾನ್ ದೇಶದ ಅಹ್ಮದ್ ಮೂಸಾ(26) ಬಂಧಿತ ವಿದೇಶಿ ಪ್ರಜೆಯಾಗಿದ್ದು, ಈತ ನಗರದ ಸಿಡೇದೆಹಳ್ಳಿ ವ್ಯಾಪ್ತಿಯಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಆಚಾರ್ಯ ಕಾಲೇಜ್ ರಸ್ತೆಯಲ್ಲಿ ಅಪರಿಚಿತ ಆಸಾಮಿಯು ಗಾಂಜಾ ಬೀಜ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಬಂದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯಿಂದ 480 ಗ್ರಾಂ ಗಾಂಜಾ ಬೀಜವನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಯಶವಂತಪುರ ಉಪವಿಭಾಗದ ಎಸಿಪಿ ರವಿ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News