ಚಿತ್ರಕಲಾ ಪರಿಷತ್‌ನಲ್ಲಿ ಜ.25 ರಿಂದ ಆರ್ಟಿಸನ್ಸ್ ಬಝಾರ್

Update: 2019-01-22 17:07 GMT

ಬೆಂಗಳೂರು, ಜ.22: ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಜ.25ರಿಂದ ಫೆ.3ರವರೆಗೆ ದೇಶದ ವಿವಿಧ ಭಾಗಗಳ ಕರಕುಶಲ ಕಲಾಕಾರರಿಂದ ಆರ್ಟಿಸನ್ಸ್ ಬಝಾರ್ ಆಯೋಜಿಸಲಾಗಿದೆ.

ದೇಶದ ಮೂಲೆ ಮೂಲೆಗಳಲ್ಲಿರುವ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ, ಗ್ರಾಂಡ್ ಫ್ಲಿಯಾ ಮಾರ್ಕೆಟ್, ಚಿತ್ತಾರದ ಸಹಯೋಗದಲ್ಲಿ ಆರ್ಟಿಸನ್ಸ್ ಬಝಾರನ್ನು ಪ್ರಸ್ತುತಪಡಿಸುತ್ತಿದೆ. ದೇಶದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಕಲಾವಿದರು ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಲಿದ್ದು, 100 ಮಳಿಗೆಗಳು ಇರಲಿವೆ. ಒರಿಸ್ಸಾ, ರಾಜಸ್ಥಾನ್, ಟ್ರೈಬಲ್ ಇನ್ನಿತರೆ ಆಭರಣಗಳು. ವುಡನ್ ಫೌಂಟೇನ್, ವುಡನ್ ವಾಚ್‌ಗಳು, ವುಡನ್ ಡ್ರೈಫ್ರೂಟ್ಸ್ ಬಾಕ್ಸ್‌ಗಳು. ತರತರಹದ ಪಿಂಗಾಣಿ ವಸ್ತುಗಳು, ಎಲ್ಲಾ ರಾಜ್ಯಗಳ ಕಲಾವಿದರು ನಿರ್ಮಿಸಿರುವ ತರತರಹದ ಸೀರೆಗಳು, ಕೊಲ್ಕತ್ತಾ ಬ್ಯಾಗಗಳು, ಕನ್ನೂರ್ ಕಾಟನ್ ಕರ್ಟನ್‌ಗಳು, ತರತರಹದ ಬೆಡ್ ಶೀಟ್‌ಗಳು ಪ್ರದರ್ಶನಕ್ಕಿರಲಿವೆ.

ಆಂಧ್ರಪ್ರದೇಶದ ಪಪೆಟ್‌ಗಳು, ಬೆಳ್ಳಿಯ ಸೂಕ್ಷ್ಮ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನೆಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News