ನೇಪಿಯರ್ ಏಕದಿನ ಪಂದ್ಯ: ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಕಿವೀಸ್

Update: 2019-01-23 04:00 GMT

ನೇಪಿಯರ್, ಜ.23: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ, ಅತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಆರಂಭಿಕ ಮೇಲುಗೈ ಹೊಂದಲು ನೆರವಾದರೆ, ಯಜುವೇಂದ್ರ ಚಾಹಲ್ ಅವರಿಗೆ ಸಾಥ್ ನೀಡಿದರು.

ನ್ಯೂಝಿಲ್ಯಾಂಡಿನ ಅಪಾಯಕಾರಿ ಆರಂಭಿಕ ಜೋಡಿಯನ್ನು ಅಗ್ಗದ ಮೊತ್ತಕ್ಕೆ ಬೇರ್ಪಡಿಸಿದ ಶಮಿ, ಮಾರ್ಟಿನ್ ಗುಪ್ಟಿಲ್ (5) ಮತ್ತು ಕೊಲಿನ್ ಮುನ್ರೊ (8) ಅವರ ವಿಕೆಟ್ ಪಡೆದರು. ಶಮಿ ಎಸೆತದಲ್ಲಿ ಈ ಇಬ್ಬರೂ ಆರಂಭಿಕ ಆಟಗಾರರು ಬೌಲ್ಡ್ ಆದರು. ಬಳಿಕ ರಾಸ್ ಟೇಲರ್ ಮತ್ತು ಟಾಮ್ ಲಾಥಂ ಅವರನ್ನು ಚಾಹಲ್ ಪೆವಿಲಿಯನ್ ಗೆ ಅಟ್ಟಿದರು.

ಇತ್ತೀಚಿನ ವರದಿಗಳು ಬಂದಾಗ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ ತಂಡ 24.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ನಾಯಕ ಕೇನ್ ವಿಲಿಯಮ್ಸ್ (47) ಮತ್ತು ಸ್ಯಾಂಟ್ನರ್(1) ಕ್ರೀಸ್‌ನಲ್ಲಿದ್ದಾರೆ.

ಶಮಿ ತಮ್ಮ ನಾಲ್ಕು ಓವರ್‌ಗಳ ಮೊದಲ ಸ್ಪೆಲ್‌ನಲ್ಲಿ 13 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದರೆ, ಚಾಹಲ್ 2 ಹಾಗೂ ಕೇದರ್ ಜಾಧವ್ 1 ವಿಕೆಟ್ ಕಿತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News