ಸಿಲ್ಕ್ ಎಕ್ಸ್‌ಪೊಗೆ ಚಾಲನೆ: ಜ.28 ರವರೆಗೆ ಪ್ರದರ್ಶನ-ಮಾರಾಟ ಮೇಳ

Update: 2019-01-23 17:06 GMT

ಬೆಂಗಳೂರು, ಜ.23: ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಇಂಡಿಯಾ(ಎಸ್‌ಎಂಒಐ) ವತಿಯಿಂದ ಜ.23ರಿಂದ 28ರವರೆಗೆ ಮಾರ್ಕ್ ಎಕ್ಸ್‌ಪೊ 2019 ಎಂಬ ರಾಷ್ಟ್ರೀಯ ಮಟ್ಟದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದೆ.

ಸುಮಾರು 11 ರಾಜ್ಯಗಳ 15ಕ್ಕೂ ಹೆಚ್ಚು ನೇಕಾರರ ಸಮೂಹವನ್ನು ಪ್ರತಿನಿಧಿಸುವ 30 ಸ್ಟಾಲ್‌ಗಳಿವೆ. ಕೇವಲ ಎಸ್‌ಎಂಒಐನಲ್ಲಿ ನೋಂದಣಿ ಮಾಡಿಕೊಂಡಿರುವ ಶುದ್ಧ ರೇಷ್ಮೆ ಉತ್ಪನ್ನಗಳ ಅಧಿಕೃತ ಉತ್ಪಾದಕರು, ನೇಕಾರರು ಮತ್ತು ರಿಟೇಲರ್‌ಗಳಿಗೆ ಮಾತ್ರ ಸ್ಟಾಲ್‌ಗಳನ್ನು ಹಂಚಿಕೆ ಮಾಡಲಾಗಿದೆ. ಮಲ್ಬರಿ, ಟೆಸ್ಸಾರ್, ಎರಿ ಮತ್ತು ಮುಗ ಕುಕೂನ್‌ಗಳು, ಎಳೆಗಳು ಮತ್ತು ಜವಳಿಗಳನ್ನು ಒಳಗೊಂಡ ಸಿಲ್ಕ್ ಮಾರ್ಕ್ ಥೀಮ್ ಪೆಲಿಯನ್ ಈ ಪ್ರದರ್ಶನದಲ್ಲಿರುತ್ತವೆ. ವನ್ಯಾ ಸಿಲ್ಕ್ ಮಾರ್ಕೆಟಿಂಗ್ ಪ್ರೊಮೋಷನ್ ಸೆಲ್(ಎಸ್‌ಎಂಪಿಸಿ) ಅಲ್ಲದೆ ಪ್ರಾಡಕ್ಟ್ ಡಿಸೈನ್, ಡೆವಲಪ್‌ಮೆಂಟ್ ಅಂಡ್ ಡೈವರ್ಸಿಫಿಕೇಷನ್(ಪಿ3ಡಿ)ಗಳಿಂದ ವನ್ಯಾ ಸಿಲ್ಕ್ ಬಳಸಿ ಅಭಿವೃದ್ಧಿಪಡಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

ಪ್ರದರ್ಶನ ಮೇಳವನ್ನು ಎಸ್‌ಎಂಓಐನ ವೈಸ್ ಚೇರ್ಮನ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ಸದಸ್ಯ ಕಾರ್ಯದರ್ಶಿ ರಜಿತ್ ರಂಜನ್ ಓಖಾಂಡಿಯರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೆಂಟ್ರಲ್ ಸಿಲ್ಕ್‌ಬೋರ್ಡ್‌ನ ಹಣಕಾಸು ನಿರ್ದೇಶಕ ಡಾ.ನರೇಂದರ್ ರೆಬಲಿ, ಐಆರ್‌ಎಸ್ ಮತ್ತು ಸೆಂಟ್ರಲ್ ಸಿಲ್ಕ್‌ಬೋರ್ಡ್ ಎಸ್‌ಎಂಓಐನ ಸಿಇಒ ಕೆ.ಎಸ್. ಗೋಪಾಲ್ ಹಾಜರಿದ್ದರು.

ಈ ಪ್ರದರ್ಶನದ ಮೇಳದಲ್ಲಿ ರೇಷ್ಮೆ ಪ್ರೇಮಿಗಳು ವೈವಿಧ್ಯಮಯ ರೇಷ್ಮೆ ಉತ್ಪನ್ನಗಳಾದ ಆಕರ್ಷಕ ವಿನ್ಯಾಸ ಮತ್ತು ಕಸೂತಿಯ ಟಸ್ಸಾರ್ ಸಿಲ್ಕ್ ಸೀರೆಗಳು, ಕಾಂತಾ ವರ್ಕ್, ಟಸ್ಸಾರ್ ಶರ್ಟ್‌ಗಳು, ಜ್ಯಾಕೆಟ್‌ಗಳು, ಎರ್ರಿ ಸಿಲ್ಕ್ ಸಾಕ್ಸ್‌ಗಳು, ಸಿಲ್ಕ್ ಬ್ಯಾಗ್‌ಗಳು, ಶರ್ಟ್‌ಗಳು, ದೋತಿಗಳು, ಬ್ಲೌಸ್‌ಗಳು, ಉಡುಪುಗಳು ಅಲ್ಲದೆ, ಸಾಂಪ್ರದಾಯಿಕ ಕಾಂಚೀಪುರಂ, ಬನಾರಸಿ, ಪೋಚಂಪಳ್ಳಿ, ಮುರ್ಷಿದಾಬಾದ್, ಮೈಸೂರು ರೇಷ್ಮೆ ಮುಂತಾದ ಉತ್ಪನ್ನಗಳು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News