ಲುಕಾಸ್ ಪೌಲ್ಲೆ ಮೊದಲ ಬಾರಿ ಸೆಮಿಫೈನಲ್‌ಗೆ

Update: 2019-01-23 18:43 GMT

ದೈತ್ಯಸಂಹಾರಿ ಕೆನಡಾದ ಮಿಲೊಸ್ ರಾವೊನಿಕ್‌ಗೆ 7-6(4), 6-3, 6-7(2), 6-4 ಸೆಟ್‌ಗಳಿಂದ ಸೋಲುಣಿಸಿದ ಫ್ರಾನ್ಸ್‌ನ ಲುಕಾಸ್ ಪೌಲ್ಲೆ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 24 ವರ್ಷದ ಪೌಲ್ಲೆ ಚಾಣಾಕ್ಷ ಆಟದ ಮೂಲಕ ಪ್ರಥಮ ಸೆಟ್‌ನ್ನು ವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲೂ ಪ್ರಾಬಲ್ಯ ಸಾಧಿಸಿದ ಅವರು, 6-3ರಿಂದ ತಮ್ಮದಾಗಿಸಿಕೊಂಡರು. ಆ ಬಳಿಕ ತಿರುಗೇಟು ನೀಡಿದ 28 ವರ್ಷದ ರಾವೊನಿಕ್ ಮೂರನೇ ಸೆಟ್‌ನ್ನು ಟೈಬ್ರೇಕರ್‌ನಲ್ಲಿ ಗೆದ್ದುಕೊಂಡರು. ಮತ್ತೆ 4ನೇ ಸೆಟ್‌ನಲ್ಲಿ ಜಯದ ಲಯಕ್ಕೆ ಮರಳಿದ ಪೌಲ್ಲೆ 6-4ರಿಂದ ಗೆದ್ದು ಮೂರು ತಾಸುಗಳ ಕಾಲ ನಡೆದ ಪಂದ್ಯವನ್ನು ತಮ್ಮದಾಗಿಸಿಕೊಂಡರು.ಸೆಮಿಫೈನಲ್ ಪಂದ್ಯದಲ್ಲಿ ಲುಕಾಸ್ ಪೌಲ್ಲೆ, ಸರ್ಬಿಯದ ಪ್ರಸಿದ್ಧ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News