ಸಂಜಿತಾ ವಿರುದ್ಧ ನಿಷೇಧ ಹಿಂಪಡೆದ ಐಡಬ್ಲ್ಯುಎಫ್

Update: 2019-01-23 18:52 GMT

ಹೊಸದಿಲ್ಲಿ, ಜ.23: ಭಾರತದ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕೆ.ಸಂಜಿತಾ ಚಾನು ಅವರ ವಿರುದ್ಧ ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಫ್)ವಿಧಿಸಿದ್ದ ನಿಷೇಧವನ್ನು ಬುಧವಾರ ಹಿಂಪಡೆದಿದೆ.

ಈ ಬೆಳವಣಿಗೆ ಕುರಿತು ಐಡಬ್ಲುಎಫ್ ಭಾರತದ ವೇಟ್‌ಲಿಫ್ಟಿಂಗ್ ಫೆಡರೇಶನ್ ಹಾಗೂ ಸಂಜಿತಾರಿಗೆ ಮಾಹಿತಿ ನೀಡಿದೆ. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಸಂಜಿತಾರಿಂದ ವಿಶ್ವ ಚಾಂಪಿಯನ್‌ಶಿಪ್‌ಗೆ ಮೊದಲು ಸಂಗ್ರಹಿಸಲಾಗಿದ್ದ ಮೂತ್ರ ಮಾದರಿಯಲ್ಲಿ ನಿಷೇಧಿತ ದ್ರವ್ಯ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 25ರ ಹರೆಯದ ಚಾನುವಿಗೆ ಕಳೆದ ವರ್ಷ ಮೇನಲ್ಲಿ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News