ಮಂಗಳೂರಿನ ಬಿ.ಶೇಖರ್ ಸೇರಿದಂತೆ ಆರು ಮಂದಿಗೆ ರಾಷ್ಟ್ರಪತಿ ಪದಕ

Update: 2019-01-25 15:41 GMT

ಬೆಂಗಳೂರು, ಜ.25: ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬಿ.ಶೇಖರ್ ಸೇರಿದಂತೆ ಆರು ಮಂದಿಗೆ 2018-19ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ಶಿಷ್ಟ ಸೇವಾ ಪದಕ: ಪ್ರಸ್ತುತ ಸಾಲಿನ ಶಿಷ್ಟ ಸೇವಾ ಪದಕಕ್ಕೆ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರಧಾನ ಕಚೇರಿಯ ಉಪನಿರ್ದೇಶಕ(ತಾಂತ್ರಿಕ) ಶಿವಕುಮಾರ್ ಭಾಜರಾಗಿದ್ದಾರೆ.

ಶ್ಲಾಘನೀಯ: ಅದೇ ರೀತಿ, ಶ್ಲಾಘನೀಯ ಸೇವಾ ಪದಕ ಬೆಂಗಳೂರು ಉತ್ತರ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ದೇವರಾಜು ಅವರಿಗೆ ಲಭಿಸಿದೆ. ಹಾಗೂ ಬೆಂಗಳೂರಿನ ಇಪಿಎಂಎಸ್ ಘಟಕದ ಜಿಲ್ಲಾ ಅಗ್ನಿಶಾಮಕಾಧಿಕಾರಿ ಟಿ.ಪಾರ್ಥಸಾರಥಿ ಅವರಿಗೆ ದಕ್ಕಿದೆ.

ಸಂಕೇಶ್ವರ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಠಾಣಾಧಿಕಾರಿ ಎಂ.ಬಿ.ಮುಧೋಳ, ಹೊನ್ನಾಳಿ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪೇಶಪ್ಪ ಅವರು ರಾಷ್ಟ್ರಪತಿ ಪದಕಕ್ಕೆ ಭಾಜರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

‘ಈ ಬಾರಿ ಪೊಲೀಸರಿಗಿಲ್ಲ ಪದಕ’
ಪ್ರತಿವರ್ಷ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೊಡಲಾಗುವ ರಾಷ್ಟ್ರಪತಿ ಪದಕ ಈ ಬಾರಿ ನೀಡುತ್ತಿಲ್ಲ. ರಾಷ್ಟ್ರಪತಿ ಪದಕ ಪ್ರದಾನ ಸಂಬಂಧ ಎಡಿಜಿಪಿ ಡಾ.ಆರ್.ಪಿ.ಶರ್ಮಾ ಅವರು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಪದಕಕ್ಕೆ ಸಿದ್ಧಪಡಿಸಿರುವ ಪೊಲೀಸರ ಪಟ್ಟಿಯನ್ನೇ ಕೇಂದ್ರ ಸರಕಾರಕ್ಕೆ ರವಾನೆ ಮಾಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News