ಪಡಿತರ ಚೀಟಿದಾರರಿಗೆ ಕಾಫಿ-ಟೀ ಪುಡಿ ವಿತರಣೆಗೆ ಚಿಂತನೆ: ಸಚಿವ ಝಮೀರ್ ಅಹ್ಮದ್ ಖಾನ್

Update: 2019-01-26 17:17 GMT

ಹಾವೇರಿ, ಜ. 26: ಪಡಿತರ ಚೀಟಿದಾರರಿಗೆ ಅಕ್ಕಿ, ತೊಗರಿಬೇಳೆ ಜೊತೆಗೆ ಮುಂದಿನ ದಿನಗಳಲ್ಲಿ ಕಾಫಿ ಪುಡಿ ಮತ್ತು ಚಹಾ ಪುಡಿಯನ್ನು ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಕಾಫಿ ಮತ್ತು ಟೀ ಪುಡಿ ವಿತರಣೆ ಸಂಬಂಧ ಶೀಘ್ರದಲ್ಲೆ ಸಿಎಂ ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಭಾವಚಿತ್ರ: ಡಾ.ಶಿವಕುಮಾರ ಸ್ವಾಮೀಜಿ ವಿಶ್ವ ಕಂಡ ಅಪ್ರತಿಮ ಸಂತರಲ್ಲಿ ಒಬ್ಬರು. ಅವರ ಭಾವಚಿತ್ರವನ್ನು ಪಡಿತರ ಚೀಟಿಯಲ್ಲಿ ಹಾಕುವುದು ಒಳ್ಳೆಯ ವಿಚಾರ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ವೆೆುತ್ರಿ ಸರಕಾರ ಐದು ವರ್ಷ ತನ್ನ ಅಧಿಕಾರ ಅವಧಿ ಪೂರೈಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಬಿಜೆಪಿಯವರು ಮೈತ್ರಿ ಸರಕಾರ ರಚನೆಯಾದ ದಿನದಿಂದ ಸರಕಾರ ಅಸ್ಥಿರಕ್ಕೆ ಯತ್ನ ನಡೆಸಿದೆ. ಇದು ಅವರ ಹಗಲು ಕನಸು ಎಂದು ಟೀಕಿಸಿದರು.

ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದ್ದ ಬಗ್ಗೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಿಜೆಪಿಯವರು ‘ಹಿಟ್ ಆ್ಯಂಡ್ ರನ್’ ಅಂತಾರೆ. ಆದರೆ, ಬಿಜೆಪಿಯವರೇ ‘ಹಿಟ್ ಆ್ಯಂಡ್ ರನ್’ ಎಂದು ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News