×
Ad

ವಿಲಾಸಿ ಜೀವನಕ್ಕೆ ಬೈಕ್ ಕಳ್ಳತನ ಮಾಡುತ್ತಿದ್ದ 2 ಬಾಲಾಪರಾಧಿಗಳ ಬಂಧನ

Update: 2019-01-26 23:03 IST

ಬೆಂಗಳೂರು, ಜ.26: ವಿಲಾಸಿ ಜೀವನಕ್ಕೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಿರುವ ಮಾರತ್‌ಹಳ್ಳಿ ಠಾಣಾ ಪೊಲೀಸರು, 9 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಬಂಧಿತ ಬಾಲಾಪರಾಧಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು, ಕಳ್ಳತನ ಮಾಡುತ್ತಿದ್ದರು. ಕದ್ದು ತಂದ ಬೈಕ್‌ಗಳನ್ನು ಹಂತ ಹಂತವಾಗಿ ಮಾರಾಟಕ್ಕೆ ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಕಾಡುಬೀಸನಹಳ್ಳಿಯಲ್ಲಿ ಆರೋಪಿಗಳು ಬೈಕ್‌ನಲ್ಲಿ ಬರುವಾಗ ಪೊಲೀಸರು ಅನುಮಾನಗೊಂಡು ತಪಾಸಣೆ ನಡೆಸಿ, ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಕೃತ್ಯ ಬಯಲಿಗೆ ಬಂದಿದೆ. ಬಂಧಿತರು ಶೇಷಾದ್ರಿಪುರಂ, ಎಚ್‌ಎಸ್‌ಆರ್ ಲೇಔಟ್ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News