ಆತಂಕದಲ್ಲಿ ಭಾರತದ ಜಾನುವಾರು ಉದ್ಯಮ

Update: 2019-01-28 06:52 GMT

ಕಡಿಮೆ ಬೆಲೆಗೆ ದೊರೆಯುವ ಭಾರತ ಸರಕಾರದ ನಿರ್ಧಾರ ದಿಂದ ರೈತರಿಗೆ ಅನ್ಯಾಯವಾಗುತ್ತದೆ. ಬಿಟಿ ಹತ್ತಿಯ ಪಶು ಆಹಾರವನ್ನು ತಿಂದ ಪ್ರಾಣಿಗಳು ನೀಡುವ ಹಾಲಿನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ತಾಂತ್ರಿಕತಜ್ಞರ ಸಮಿತಿಯ ವರದಿಯನ್ನು ನಾವು ನಿರ್ಲಕ್ಷಿಸಕೂಡದು

ಫಾಲ್ ಆರ್ಮಿ ವರ್ಮ್‌ಎಂಬ ಒಂದು ಹುಳುವಿನ ಬಾಧೆ ಮತ್ತು ಕಡಿಮೆ ಮಳೆಯಿಂದಾಗಿ ಈ ಸಾಲಿನ ಖಾರಿಫ್ ಋತುವಿನಲ್ಲಿ ಭಾರತದ ಮೆಕ್ಕೆಜೋಳ ಇಳುವರಿ ತುಂಬ ಕಡಿಮೆಯಾಗುವ ನಿರೀಕ್ಷೆ ಇದೆ ಎನ್ನುತ್ತವೆ ಮಾಧ್ಯಮದ ವರದಿಗಳು. ಇದರಿಂದಾಗಿ ಕಳೆದ ಅಕ್ಟೋಬರ್‌ನಲ್ಲಿ ಕ್ವಿಂಟಾಲ್ ಒಂದರ ರೂ. 1,100 ಇದ್ದ ಬೆಲೆ ಈಗಾಗಲೆ ಸುಮಾರು 2,000 ರೂಪಾಯಿಗಳಿಗೆ ಏರಿದೆ. ಇಳುವರಿ ಒಟ್ಟು ಎಷ್ಟು ಕಡಿಮೆಯಾಗಬಹುದೆಂದು ಸರಕಾರ ಇನ್ನೂ ತನ್ನ ಅಂದಾಜುನ್ನು ಪ್ರಕಟಿಸಿಲ್ಲ. ಆದರೆ ಕೋಳಿಸಾಕಣೆ ರೈತರು ಮತ್ತು ಕೋಳಿ ಆಹಾರದ ಉತ್ಪಾದಕರು ಅದರ ಬೆಲೆ ಗಗನಕ್ಕೇರಬಹುದೆಂದು ಈಗಾಗಲೆ ಆತಂಕಿತರಾಗಿದ್ದಾರೆ.

ಮೇವಿನ, ಪಶು ಆಹಾರದ ಈ ಕೊರತೆಯನ್ನು ನೀಗಿಸಲು ಡಿಸ್ಟಿಲರ್ ಡ್ರೈಡ್ ಗ್ರೈಸ್ ವಿತ್ ಸಾಲ್ಯುಬಲ್ಸ್(ಡಿಡಿಜಿಎಸ್) ಅಥವಾ ನೀರಿನಲ್ಲಿ ಕರಗುವ ಒಣ ಧಾನ್ಯಗಳನ್ನು ಅಮೆರಿಕದಿಂದ ಆಮದುಮಾಡಿಕೊಳ್ಳಬೇಕೆಂದು ಭಾರತದ ಪಶು ಆಹಾರ ಉದ್ಯಮ ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದೆ. ಡಿಡಿಜಿಎಸ್ ಎಂಬುದು ಜೋಳದಿಂದ ಉತ್ಪಾದಿಸಲಾಗುವ ಇಥೆನಾಲ್‌ನ ಒಂದು ಉಪ ಉತ್ಪನ್ನ. ಕೊಬ್ಬು, ಖನಿಜ ಲವಣಗಳು ಮತ್ತು ವಿಟಮಿನ್‌ಗಳ ಮತ್ತು ಪ್ರೊಟೀನ್‌ನ ಅಗ್ಗದ ಒಂದು ಮೂಲ; ಹಾಗೂ ಅದನ್ನು ಪಶು ಆಹಾರಕ್ಕೆ ಒಂದು ಘಟಕವಾಗಿ ಸೇರಿಸಬಹುದಾಗಿದೆ. ಆದರೆ ಅಮೆರಿಕದಲ್ಲಿ ಡಿಡಿಜಿಎಸ್‌ನ್ನು ಅನುವಂಶೀಯವಾಗಿ ಬದಲಿಸಲಾದ ಜೋಳದಿಂದ ಅಂದರೆ ಜೆನೆಟಿಕಲಿ ಮಾಡಿಫೈಡ್ ಜೋಳದಿಂದ (ಜಿಎಮ್) ತಯಾರಿಸಲಾಗುತ್ತದೆ.

‘‘ಜಿಎಮ್ ಅಲ್ಲದ ಮಿಗತೆ ಜೋಳವು ಉಕ್ರೈನ್ ಮತ್ತು ಆಫ್ರಿಕಾದ ದೂರದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ,’’ ಎನ್ನುತ್ತಾರೆ ಮಹಾರಾಷ್ಟ್ರದಲ್ಲಿ ಕಚೇರಿ ಹೊಂದಿರುವ ‘ಕಾಂಪೌಂಡ್ ಲೈವ್‌ಸ್ಟಾಕ್ ಫೀಡ್ ಮ್ಯಾನ್ಯುಫ್ಯಾಕ್ಚರರ್ಸ್‌ ಅಸೋಸಿಯೇಶನ್ ಆಫ್ ಇಂಡಿಯಾ’ದ ಕಾರ್ಯನಿರ್ವಾಹಕ ನಿರ್ದೇಶಕ ರಾಘವನ್ ಸಂಪತ್ ಕುಮಾರ್. ಜಿಎಮ್ ವೆರೈಟಿಗಳು ಇತರ ಇಂತಹ ಉತ್ಪನ್ನಗಳಿಗಿಂತ ಅಗ್ಗ.

ಉಕ್ರೈನ್‌ನಲ್ಲಿ ಈಗ ಧಾನ್ಯ / ಮೆಕ್ಕೆಜೋಳಕ್ಕೆ ಟನ್ ಒಂದರ 161 ಡಾಲರ್ ಆಗಿದೆ; ಅಮೆರಿಕದ ಶಿಕಾಗೊದಲ್ಲಿ ಇದು 148 ಡಾಲರ್ ಆಗಿದೆ. ಸದ್ಯದ ವಿನಿಮಯದರದಲ್ಲಿ 13 ಡಾಲರ್‌ಗಳ ವ್ಯತ್ಯಾಸವೆಂದರೆ ಒಂದು ಕಿಲೊಗ್ರಾಂಗೆ ಒಂದು ರೂಪಾಯಿ ವ್ಯತ್ಯಾಸ.

ಭಾರತದಲ್ಲಿ ಇಷ್ಟರವರೆಗೆ ಜಿಎಮ್ ಡಿಡಿಜಿಎಸ್‌ನ ಆಮದಿಗೆ ಯಾವುದೇ ನಿಯಂತ್ರಣವಿಲ್ಲ. ಈ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬರಲಾಗದೆ ಕೇಂದ್ರ ಪರಿಸರ ಸಚಿವಾಲಯವು ಇದಕ್ಕೆ ಸಂಬಂಧಿಸಿ 2018ರ ಸೆಪ್ಟಂಬರ್‌ನಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಆದರೆ ಆ ಸಮಿತಿ ಇನ್ನೂ ಸಭೆಸೇರಿಲ್ಲ.

ಪರಿಸರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೂವಲ್ ಕಮಿಟಿ (ಜಿಇಎಸಿ)ಯ ಸಲಹೆಗಾರ್ತಿ ಮತ್ತು ಉಪಾಧ್ಯಕ್ಷೆ ಸುಜಾತಾ ಅರೋರಾ, ಪಶು ಆಹಾರ ಆಮದಿಗೆ ಸಂಬಂಧಿಸಿದ ಅರ್ಜಿಯನ್ನು ತಡೆಹಿಡಿಯಲಾಗಿದೆ.

► ಇನ್ನಷ್ಟು ಮೇವಿನ ಅಗತ್ಯವಿದೆ

ಜಾನ್ಸಿಯಲ್ಲಿರುವ ಗ್ರಾಸ್‌ಲ್ಯಾಂಡ್ ಆ್ಯಂಡ್‌ಫಾಡರ್ ರಿಸರ್ಚ್ ಇನ್‌ಸ್ಟಿಟ್ಯೂಟ್ 2013ರಲ್ಲಿ ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಮೇವಿನ 50.2ಶೇಕಡಾ ಕೊರತೆ ಇದೆ. ಪ್ರತಿವರ್ಷ 30 ಮಿಲಿಯ ಟನ್ ಮೇವನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ 20ಮಿಲಿಯ ಟನ್ ಕೋಳಿಸಾಕಣೆ ರಂಗಕ್ಕೆ ಹೋಗುತ್ತದೆ. 9 ಮಿಲಿಯ ಟನ್ ಡೇರಿಗಳಿಗೆ ಮತ್ತು 1 ಮಿಲಿಯ ಟನ್ ಜಲಕೃಷಿಗೆ ( ಅಕ್ವಾಕಲ್ಚರ್) ಹೋಗುತ್ತದೆ. ಆದರೂ ಸಾಕಷ್ಟು ಹಾಗೂ ಪೌಷ್ಟಿಕಾಂಶಯುಕ್ತವಾದ ಮೇವಿನ ಕೊರತೆಯಿಂದಾಗಿ ರೈತರಿಗೆ ಜಾನುವಾರಗಳ ಸಾಕಣೆ ಕಷ್ಟವಾಗುತ್ತದೆ.

► ನೇತ್ಯಾತ್ಮಕ ಪರಿಣಾಮಗಳು

ಹತ್ತಿ ಬೀಜದ ಹಿಂಡಿ ಮಾತ್ರ ಭಾರತದಲ್ಲಿ ಪಶು ಆಹಾರವಾಗಿ ಅಂಗೀಕರಿಸಲ್ಪಟ್ಟಿರುವ ಏಕೈಕ ಜೀವತಾಂತ್ರಿಕ(ಬಯೋಟೆಕ್) ಉತ್ಪನ್ನ, ಆದರೆ ಜಿಎಮ್ ಹತ್ತಿಹಿಂಡಿಯ ಬಳಕೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಅನುವಂಶೀಯವಾಗಿ ಬದಲಾಯಿಸಲಾದ ಅಂದರೆ ಜಿಎಮ್ ಹತ್ತಿಹಿಂಡಿಯನ್ನು ಪಶುಗಳಿಗೆ ನೀಡುವುದರಿಂದ ಹಸುಗಳ ಸಂತಾನೋತ್ಪತ್ತಿ ಚಕ್ರದ( ರಿಪ್ರೊಡಕ್ಟಿವ್ ಸೈಕಲ್) ಮೇಲೆ ನೇತ್ಯಾತ್ಮಕ ಪರಿಣಾಮ ಉಂಟಾಗಿರುವುದು ದೃಢಪಟ್ಟಿದೆ. ‘‘ ಹಲವು ಹಸುಗಳು ಚಿಕ್ಕ ವಯಸ್ಸಿನಲ್ಲೆ ಗೊಡ್ಡಾದವು,’’ಎಂದಿದ್ದಾನೆ, ಅಹಮದಾಬಾದ್ ಸಮೀಪದ ಸರ್ಖೇಜ್ ಹಳ್ಳಿಯ ಓರ್ವರೈತ ಗೋಪಾಲ್ ಸುತ್ರಿಯಾ. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. ಯುಎಸ್ ಗ್ರೈಯಿನ್ಸ್ ಕೌನ್ಸಿಲ್ ಇನ್ ಸೌತ್ ಇಂಡಿಯಾದ ಅಮಿತ್ ಸಚ್‌ದೇವ್, ಡಿಡಿಜಿಎಸ್ ಎಂಬುದು ಜಿಎಮ್‌ನ ಅಡಿಯಲ್ಲಿ ಬರುವುದಿಲ್ಲ; ಯಾಕೆಂದರೆ ಅದೊಂದು ಉಪ ಉತ್ಪನ್ನ. ರೈತರಿಗೆ ಕೈಗೆಟಕುವ ಬೆಲೆಗೆ ಸಿಗುವಂತೆ ಮಾಡಬೇಕಾದರೆ ಆಮದು ಮಾಡಿಕೊಳ್ಳುವುದು ಅಗತ್ಯ ಎನ್ನುತ್ತಾರೆ.

ಆದರೆ, ಮುಂಬಯಿಯ ಕೃಷಿ ಹಾಗೂ ಆಹಾರ ನೀತಿ ವಿಶ್ಲೇಷಕ ರೋಹಿತ್ ಪ್ರಕಾಶ್ ಹೇಳುತ್ತಾರೆ;‘‘ಕಡಿಮೆ ಬೆಲೆಗೆ ದೊರೆಯುವ ಭಾರತ ಸರಕಾರದ ನಿರ್ಧಾರ ದಿಂದ ರೈತರಿಗೆ ಅನ್ಯಾಯವಾಗುತ್ತದೆ. ಬಿಟಿ ಹತ್ತಿಯ ಪಶು ಆಹಾರವನ್ನು ತಿಂದ ಪ್ರಾಣಿಗಳು ನೀಡುವ ಹಾಲಿನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ತಾಂತ್ರಿಕತಜ್ಞರ ಸಮಿತಿಯ ವರದಿಯನ್ನು ನಾವು ನಿರ್ಲಕ್ಷಿಸಕೂಡದು’’. ಆದರೆ ಇಂತಹ ಭಯಗಳು ಬೇಕಾಗಿಲ್ಲ ಎಂದು ವಾದಿಸಲಾಗಿದೆ. ಡಿಡಿಜಿಎಸ್‌ಅನ್ನು ಭಾರತವು ಉತ್ಪಾದಿಸುವುದಿಲ್ಲವಾದ್ದರಿಂದ, ಅದರ ಆಮದಿಗೆ ಸರಕಾರದ ಅನುಮತಿ ಬೇಕಾಗಿದೆ. ಸ್ಥಳೀಯ ಪಶುಆಹಾರದ ಕೊರತೆ ಉಂಟಾದಲ್ಲಿ ಇದು ಒಂದು ಆಯ್ಕೆ.

ಇದಕ್ಕೆ ಬದಲಿಯಾಗಿ ಒಂದು ರೀತಿಯ ಜಲ ಸಸ್ಯವಾಗಿರುವ ಅರೊಲ್ಲಾ, ಪಾಪಸ್‌ಕಳ್ಳಿ(ಕ್ಯಾಕ್ಟಸ್) ಮತ್ತು ಒಂದು ಜಾತಿಯ ಮರದಿಂದ( ಮೆಸ್‌ಕ್ವೈಟ್) ದೊರಕುವ ಕೋಡುಗಳನ್ನು ಪಶು ಆಹಾರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ, ಎನ್ನುತ್ತಾರೆ ತಜ್ಞರು. ಸಂಶೋಧನಾ ಸಂಸ್ಥೆಯೊಂದರ ಕಾರ್ಯವಾಹಕ ಅಧಿಕಾರಿ ಯಾಗಿರುವ ವಿಠಲ್ ಕೇಶವ್ ಕೌತಲೆಯವರು ಇದಕ್ಕೆ ಮುಳ್ಳುಗಳಿಲ್ಲದ ಕ್ಯಾಕ್ಟಸ್ ಬಳಸಿ ನಡೆಸಿದ ಸಂಶೋಧನೆಯನ್ನು ಉದಾಹರಿಸುತ್ತಾರೆ. ನಿರ್ದಿಷ್ಟವಾದ ಈ ಕ್ಯಾಕ್ಟಸ್‌ನ್ನು ತಿಂದ ಆಡುಗಳ ದೇಹದ ತೂಕ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಇಂತಹ ಕ್ರಮಗಳು ಭಾರತಕ್ಕೆ ಜಿಎಮ್ ಪಶುಆಹಾರದ ಪ್ರವೇಶವನ್ನು ತಡೆಯಲು ಸಮರ್ಥವಾದವೇ ಎಂದು ಕಾದು ನೋಡಬೇಕಾಗಿದೆ.

ಕೃಪೆ: scroll.in

Writer - ಮೀನಾಕ್ಷಿ ಸುಶ್ಮಾ

contributor

Editor - ಮೀನಾಕ್ಷಿ ಸುಶ್ಮಾ

contributor

Similar News