ಯಾಂಬುವಿಯಲ್ಲಿ ಯಶಸ್ವಿಯಾಗಿ ನಡೆದ ಫ್ರೆಟರ್ನಿಟಿ ಟ್ರೋಫಿ ಕ್ರಿಕೆಟ್, ಫುಟ್ಬಾಲ್ ಪಂದ್ಯಾಟ.

Update: 2019-01-28 09:57 GMT

ರಿಯಾದ್, ಜ. 28: ಇಂಡಿಯಾ ಫ್ರೆಟರ್ನಿಟಿ ಫೋರಮ್ ಇದರ ಫ್ರೆಟರ್ನಿಟಿ ಫೆಸ್ಟ್ ಅಂಗವಾಗಿ ಯಾಂಬುವಿನಲ್ಲಿ ಅನಿವಾಸಿ ಕನ್ನಡಿಗರಿಗೆ ಇಂಡಿಯಾ ಫ್ರೆಟರ್ನಿಟಿ ಫೋರಮ್ ಯಾಂಬು ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಹಾಗು ಪೆನಾಲ್ಟಿ ಶೂಟೌಟ್ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಪಂದ್ಯಾಟವನ್ನು ಐಎಫ್ಎಫ್ ವಲಯಾಧ್ಯಕ್ಷ ಮುಸ್ತಫಾ ಬಜ್ಪೆ ಉದ್ಘಾಟಿಸಿ, ಐಎಫ್ಎಫ್ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಪಂದ್ಯಾಟ ಆಯೋಜನೆ ಮಹತ್ವನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಬಿನ್ ಫಹಾದ್ ತಂಡ ಮಾಲಕ ನಝೀರ್ ಬಳ್ಕುಂಜೆ, ಐಎಫ್ಎಫ್ ಯಾಂಬು ದೆಹಲಿ ಚಾಪ್ಟರ್ ಅಧ್ಯಕ್ಷ ಶೌಕತ್ ಅಲಿ ಹಾಗು ಐಎಸ್ ಎಫ್ ಯಾಂಬು ಉಪಾಧ್ಯಕ್ಷ ಇಕ್ಬಾಲ್ ಆರ್ಲ ಆಗಮಿಸಿದ್ದರು. ಐಎಫ್ಎಫ್ ಯಾಂಬು ವಲಯದ ಕಾರ್ಯದರ್ಶಿ ಹಫೀಝ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. 

ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಲಕ್ಕಿ ಸ್ಟಾರ್ ಕೋಡಿ ತಂಡ ಟ್ರೋಫಿ ಹಾಗು ಆಡು ಪ್ರಶಸ್ತಿಯನ್ನು ಪಡೆದುಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಜಿಸ್ಮಾನ್ ಉಳ್ಳಾಲ ತಂಡ ಟ್ರೋಫಿ ಹಾಗು ಕೋಳಿ ಯನ್ನು ಪಡೆದುಕೊಂಡಿತು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಹಾಗು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೋಡಿ ತಂಡದ ಜವಾಹರ್ ಪಡೆದುಕೊಂಡರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಮನ್ಸೂರ್ ಉಳ್ಳಾಲ ಹಾಗು ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಅಝೀಝ್ ಪಡೆದುಕೊಂಡರು.

ಪೆನಾಲ್ಟಿ ಶೂಟೌಟ್ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಮಲಬಾರ್ ಒನ್ ತಂಡ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಮಲಬಾರ್ ಟು ತಂಡ ಪಡೆದುಕೊಂಡಿತು. ಬೆಸ್ಟ್ ಶೂಟರ್ ಆಗಿ ರಝಾಕ್ ಮಲಬಾರ್ ಒನ್ ಹಾಗು ಬೆಸ್ಟ್ ಗೋಲ್ ಕೀಪರ್ ಆಗಿ ಯಾಂಬು ಟೈಗರ್ಸ್ ತಂಡದ ಅಝೀಝ್  ಪ್ರಶಸ್ತಿ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News