ಎನ್‌ಕೌಂಟರ್‌ನಲ್ಲಿ ಐವರು ಮಾವೊವಾದಿಗಳ ಹತ್ಯೆ

Update: 2019-01-29 16:34 GMT
ಸಾಂದರ್ಭಿಕ ಚಿತ್ರ

ರಾಂಚಿ, ಜ. 29: ಜಾರ್ಖಂಡ್‌ನಲ್ಲಿ ಭದ್ರತಾ ಪಡೆ ಮಂಗಳವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಐವರು ನಕ್ಸಲೀಯರು ಹತರಾಗಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ 2 ಎ.ಕೆ. 47 ರೈಫಲ್, ಒಂದು 303 ರೆಫಲ್, 5 ಪಿಸ್ತೂಲು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖುಂತಿ ಹಾಗೂ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗಡಿಯಲ್ಲಿರುವ ಬರಿ ಪೊಲೀಸ್ ಠಾಣೆಯ ವ್ಯಾಪ್ತಿಯ ರೋಟ್ಕಾಟೋಲಿ ಗ್ರಾಮದ ಸಮೀಪ ಕೇಂದ್ರ ಮೀಸಲು ಪಡೆಯ ತಂಡ 209 ಕೋಬ್ರಾ ಬೆಟಾಲಿಯನ್ ಹಾಗೂ ರಾಜ್ಯ ಪೊಲೀಸರು ಬೆಳಗ್ಗೆ 6.30ಕ್ಕೆ ಎನ್‌ಕೌಂಟರ್ ನಡೆಸಿದರು. ಈ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಅವರು ತಿಳಿಸಿದರು. ಗುಂಡಿನ ಚಕಮಕಿಯಲ್ಲಿ ಐವರು ನಕ್ಸಲೀಯರು ಹತರಾಗಿದ್ದಾರೆ. ಓರ್ವ ಗಂಭೀರ ಗಾಯಗೊಂಡಿದ್ದಾನೆ. ಯೋಧರು, ಪೊಲೀಸರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಮೃತಪಟ್ಟ ನಕ್ಸಲೀಯರ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News