2019 ಎಎಫ್‍ಸಿ ಏಷ್ಯನ್ ಕಪ್ ಫುಟ್ಬಾಲ್: ಯುಎಇಯನ್ನು ಮಣಿಸಿ ಫೈನಲ್ ತಲುಪಿದ ಕತರ್

Update: 2019-01-30 09:54 GMT

ಅಬುಧಾಬಿ, ಜ.30: ಆತಿಥೇಯ ಯುಎಇ ತಂಡವನ್ನು 4-0 ಅಂತರದಿಂದ ಸೋಲಿಸಿ ಕತರ್ 2019 ಎಎಫ್‍ಸಿ ಏಷ್ಯನ್ ಕಪ್ ಫುಟ್ಬಾಲ್‍ ಪಂದ್ಯಾಟದ ಫೈನಲ್ ಪ್ರವೇಶಿಸಿದೆ.

ಕತರ್ ಶುಕ್ರವಾರದ ಅಂತಿಮ ಹಣಾಹಾಣಿಯಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ಪಂದ್ಯ ಆರಂಭಗೊಂಡ 22ನೇ ನಿಮಿಷದಲ್ಲಿ ಕತರ್ ತಂಡದ ಬೌಲೆಮ್ ಖೌಕ್ಕಿ ಗೋಲ್ ಬಾರಿಸಿದರೆ, 15 ನಿಮಿಷಗಳ ನಂತರ ಅಲ್ಮೋಝ್ ಅಲಿ ಇನ್ನೊಂದು ಗೋಲ್ ಬಾರಿಸಿದರು. 80ನೇ ನಿಮಿಷದಲ್ಲಿ ಹಸನ್ ಅಲ್- ಹೈದೋಸ್ ತಂಡಕ್ಕೆ ಮೂರನೇ ಗೋಲ್ ಬಾರಿಸಿದರೆ ನಾಲ್ಕನೇ ಗೋಲ್ ಅನ್ನು ಇಸ್ಮಾಯಿಲ್  ಬಾರಿಸಿದ್ದರು. ಕತರ್ ತನ್ನ ಅಂತಿಮ ಗೋಲ್ ಬಾರಿಸುವ ಮುಂಚೆ ಅತಿಥೇಯ ತಂಡದ ಡಿಫೆಂಡರ್ ಇಸ್ಮಾಯಿಲ್ ಅಹ್ಮದ್ ಅವರನ್ನು ವಿಎಆರ್ ರಿವೀವ್ ನಂತರ ಹೊರಕ್ಕೆ ಕಳುಹಿಸಲಾಗಿತ್ತು. ತನ್ನ ಮೊಣಕೈಯನ್ನು ಸಲೀಂ ಅಲ್-ಹಜ್ರಿ ಅವರ ಮುಖಕ್ಕೆ ತಾಗಿಸಿದ ನಂತರ ಈ ಕ್ರಮ ಕೈಗೊಂಡಿರುವುದು ಪ್ರೇಕ್ಷಕರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತ್ತು.

ಪಂದ್ಯ ಆರಂಭಗೊಳ್ಳುವುದಕ್ಕಿಂತ ಮುಂಚೆಯೇ ಕತರ್ ರಾಷ್ಟ್ರಗೀತೆ ನುಡಿಸಲಾಗುತ್ತಿದ್ದಾಗ ಪ್ರೇಕ್ಷಕರು ದೊಡ್ಡ ದನಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದುದು ಕೇಳಿಸಿತ್ತು. ಪಂದ್ಯದ ಫೈನಲ್ ತಲುಪುವ ಅತಿಯಾದ ನಿರೀಕ್ಷೆ ಅತಿಥೇಯ ತಂಡಕ್ಕಿತ್ತು, ಆದರೆ ಈಗ ನಿರಾಸೆಯ ಜತೆಗೆ ಪ್ರೇಕ್ಷಕರ ದುರ್ವರ್ತನೆಗೆ ಅದು ಫಿಫಾ ನಿರ್ಬಂಧಗಳನ್ನೂ ಎದುರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News