ಬೆಂಗಳೂರು ಕೃಷಿ ವಿವಿಗೆ ಪ್ರಥಮ ಸ್ಥಾನ

Update: 2019-01-31 17:02 GMT

ಬೆಂಗಳೂರು, ಜ.31: ಭಾರತೀಯ ಕೃಷಿ ಅನುಸಂಧಾನ ಪರಿಷತ್ ‘ಕೃಷಿ ವಿಜ್ಞಾನ, ತೋಟಗಾರಿಕೆ, ಎಂಜಿನಿಯರ್ ಮತ್ತು ತಂತ್ರಜ್ಞಾನ ಹಾಗೂ ಪಶುವೈದ್ಯಕೀಯ ವಿಭಾಗಗಳಿಗೆ ನಡೆಸಿದ ರಾಷ್ಟ್ರಮಟ್ಟದ ‘ಕಿರಿಯ ಸಂಶೋಧನಾ ಫೆಲೋಶಿಪ್’ ಪರೀಕ್ಷೆಯಲ್ಲಿ ಬೆಂಗಳೂರು ಕೃಷಿ ವಿವಿ ಪ್ರಥಮ ಸ್ಥಾನ ಪಡೆದಿದೆ.

ದೇಶದ ವಿವಿಧ ಮೂಲೆಗಳಿಂದ 60 ಕ್ಕೂ ಅಧಿಕ ಕೃಷಿ ವಿವಿಗಳು ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರು ಕೃಷಿ ವಿವಿಯು ಕೃಷಿ ವಿಜ್ಞಾನದ 56 ಹಾಗು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 7 ಸೇರಿದಂತೆ ಒಟ್ಟು 63 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಮೋಹನ್ ಸಿಂಗ್ ಅವರಿಂದ ಬೆಂಗಳೂರು ಕೃಷಿ ಕುಲಪತಿ ಡಾ. ಎಸ್.ರಾಜೇಂದ್ರಪ್ರಸಾದ್ ಅವರು ಪ್ರಶಸ್ತಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News