ದುಬೈ: ದಾರುನ್ನೂರ್ ವತಿಯಿಂದ ಸನ್ಮಾನ ಸಮಾರಂಭ, ವಿದಾಯ ಕೂಟ

Update: 2019-02-01 04:42 GMT

ದುಬೈ, ಫೆ.1: ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ಇದರ ಯುಎಇ ಕಲ್ಚರಲ್ ಸೆಂಟರ್ ವತಿಯಿಂದ ದುಬೈಗೆ ಆಗಮಿಸಿದ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಮುಖರಿಗೆ ಸನ್ಮಾನ ಮತ್ತು ಗಲ್ಫ್ ಉದ್ಯೋಗ ತೊರೆದು ತವರಿಗೆ ಹಿಂದಿರುಗುತ್ತಿರುವ ದಾರುನ್ನೂರ್ ಯೂತ್ ಟೀಮ್  ಅಧ್ಯಕ್ಷ ಸಫಾ ಇಸ್ಮಾಯೀಲ್ ಬಜ್ಪೆಯವರಿಗೆ ವಿದಾಯ ಕೂಟ ಇತ್ತೀಚೆಗೆ ದೇರಾ ದುಬೈಯಲ್ಲಿರುವ ಖಲೀಜ್ ಗ್ರಾಂಡ್ ಹೋಟೆಲ್ ಆಡಿಟೋರಿಯಮ್ ನಲ್ಲಿ ನಡೆಯಿತು.

ದಾರುನ್ನೂರ್ ಯುಎಇ ಕಲ್ಚರಲ್ ಸೆಂಟರ್ ಅಧ್ಯಕ್ಷ ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ದಾರುನ್ನೂರ್ ಯುಎಇ ಉಪದೇಶಕ ಸಯ್ಯದ್ ಅಸ್ಗರ್ ಅಲಿ ತಂಙಳ್ ಉದ್ಘಾಟಿಸಿದರು.

ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಮಂಗಳೂರು, ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಿ.ಸಿ.ರೋಡ್ ಹಾಗೂ ಸಫಾ ಇಸ್ಮಾಯೀಲ್ ಬಜ್ಪೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಿದ್ದೀಕ್ ಉಚ್ಚಿಲ್, ಪ್ರಮುಖ ಸಲಹೆಗಾರ ಸಲೀಂ ಅಲ್ತಾಫ್ ಫರಂಗಿಪೇಟೆ, ದಾರುನ್ನೂರ್ ಅಬುಧಾಬಿ ಸ್ಟೇಟ್ ಅಧ್ಯಕ್ಷ ರವೂಫ್ ಹಾಜಿ ಕೈಕಂಬ, ಅಬ್ದುಲ್ ಸಲಾಂ ಬಪ್ಪಳಿಗೆ, ಮಹಮ್ಮದ್ ರಫೀಕ್ ಸುರತ್ಕಲ್, ಉಸ್ಮಾನ್ ಕೆಮ್ಮಿಂಜೆ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷ ಸಂಶುದ್ದೀನ್ ಸೂರಲ್ಪಾಡಿ ಮಾತನಾಡಿ, ಸಾಮಾಜಿಕ ರಂಗದಲ್ಲಿ ಹನೀಫ್ ಹಾಜಿ, ಅಬ್ದುಲ್ ರಝಾಕ್ ಬಿ.ಸಿ.ರೋಡ್ ಹಾಗೂ ಸಫಾ ಇಸ್ಮಾಯಿಲ್ ಅವರ ಕೊಡುಗೆಯನ್ನು ಸ್ಮರಿಸಿದರು. 

ಅಬ್ದುಲ್ ಸಲಾಂ ಬಪ್ಪಳಿಗೆ, ಮಹಮ್ಮದ್ ರಫೀಕ್ ಸುರತ್ಕಲ್, ಉಸ್ಮಾನ್ ಕೆಮ್ಮಿಂಜೆ ಮೊದಲಾದವರು ಮಾತನಾಡಿದರು.

ದಾರುನ್ನೂರ್ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಅತಿಥಿಗಳ ಪರಿಚಯ ನೀಡಿದರು. ದಾರುನ್ನೂರ್ ದುಬೈ ಸ್ಟೇಟ್ ಅಧ್ಯಕ್ಷ ಮುಹಮ್ಮದ್ ರಫೀಕ್ ಆತೂರು ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News