×
Ad

ಬಜರಂಗದಳದಿಂದ ವೃದ್ಧೆಯರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ವುಮೆನ್ ಇಂಡಿಯಾ ಮೂವ್‌ಮೆಂಟ್ ಒತ್ತಾಯ

Update: 2019-02-01 22:29 IST
 ವುಮೆನ್ ಇಂಡಿಯಾ ಮೂಮೆಂಟ್‌ ಅಧ್ಯಕ್ಷೆ ಶಾಹಿದಾ ತಸ್ನೀಂ

ಬೆಂಗಳೂರು, ಫೆ.1: ದನದ ಮಾಂಸದ ಆಹಾರ ಮಾರಾಟದ ಆರೋಪವನ್ನು ಹೊರಿಸಿ 70ರ ಹರೆಯದ ವೃದ್ಧೆ ಮಹಿಳೆಯರ ಮೇಲೆ ಹಲ್ಲೆ ಹಾಗೂ ಪ್ರಾಣ ಬೆದರಿಕೆ ಒಡ್ಡಿರುವ ಬಜರಂಗದಳಕ್ಕೆ ಸೇರಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ವುಮೆನ್ ಇಂಡಿಯಾ ಮೂವ್‌ಮೆಂಟ್ ಸಂಘಟನೆ ಒತ್ತಾಯಿಸಿದೆ.

ಹಾಸನದ ಸಕಲೇಶಪುರ ಎಪಿಎಂಸಿ ಸಂತೆ ಮೈದಾನದಲ್ಲಿ ಮಾಂಸದ ವ್ಯಾಪಾರ ಮಾಡುತ್ತಿದ್ದ ವೃದ್ಧ ಮಹಿಳೆಯರಾದ ಖಮರುನ್ನಿಸಾ ಹಾಗೂ ಶಂಶಾದ್ ಮೇಲೆ ಹಲ್ಲೆ ಮಾಡಿರುವ ಬಜರಂಗದಳದ ಕಾರ್ಯಕರ್ತರು ಅವರು ಕೆಲಸ ಮಾಡುತ್ತಿದ್ದ ಟೆಂಟ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ನಂತರ ವೃದ್ಧ ಮಹಿಳೆಯರ ಮೇಲೆ ಬಿಸಿ ಸಾಂಬಾರು ಸುರಿದು, ಇನ್ನೊಮ್ಮೆ ಮಾಂಸದ ಅಡುಗೆ ಮಾಡಿದರೆ ನಿಮ್ಮನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೆ ಬಂಧಿಸುವ ಮೂಲಕ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ವುಮೆನ್ ಇಂಡಿಯಾ ಮೂಮೆಂಟ್‌ನ ಅಧ್ಯಕ್ಷೆ ಶಾಹಿದಾ ತಸ್ನೀಂ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News