ಲೋಕಸಭಾ ಚುನಾವಣೆಯಲ್ಲಿ ಲಂಬಾಣಿ ಸಮುದಾಯಕ್ಕೆ ಅವಕಾಶ ನೀಡಲು ಲಲಿತಾ ನಾಯಕ್ ಆಗ್ರಹ

Update: 2019-02-01 17:41 GMT

ಬೆಂಗಳೂರು, ಫೆ.1: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಲಂಬಾಣಿ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ಪ್ರದೇಶ ಲಂಬಾಣಿ ಸೇವಾ ಸಂಘ ಅಧ್ಯಕ್ಷೆ ಲಲಿತಾ ನಾಯಕ್ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಲಂಬಾಣಿ ಜನಾಂಗದ ಎಲ್.ಆರ್.ನಾಯಕ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರ ನಂತರ ರಾಜ್ಯದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಲಂಬಾಣಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಿಲ್ಲ. ಹೀಗಾಗಿ, ನಮ್ಮ ಸಮುದಾಯದವರಿಗೆ ಮುಂಬರುವ ಲೋಕಸಭಾ ಚುನಾಚಣೆಯಲ್ಲಿ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದಲ್ಲಿ ಲಂಬಾಣಿ ಸಮುದಾಯದವರು 35ರಿಂದ 40 ಲಕ್ಷ ಜನಸಂಖ್ಯೆ ಇದ್ದಾರೆ. ಅಲ್ಲದೆ ಕಲಬುರ್ಗಿ, ವಿಜಯಪುರ ಮತ್ತು ಚಿತ್ರದರ್ಗ ಜಿಲ್ಲೆಯಲ್ಲಿ ಹೆಚ್ಚಿನ ಮತದಾರರಿದ್ದಾರೆ. ಇಷ್ಟು ಮತದಾರರನ್ನು ಹೊಂದಿರುವ ಸಮುದಾಯಕ್ಕೆ ಲೋಕಸಭೆಯಲ್ಲಿ ಚುನಾಚಣೆಯಲ್ಲಿ ಪ್ರಾತಿನಿಧ್ಯ ನೀಡದೇ ಲಂಬಾಣಿ ಜನಾಂಗವನ್ನು ವಂಚಿಸಲಾಗುತ್ತದೆ ಎಂದು ಆರೋಪಿಸಿದರು.

ಈ ಜನಾಂಗವು ಕಾಡು-ಮೇಡು, ಗಿಡ್ಡ-ಗಾಡುಗಳಲ್ಲಿ ವಾಸಿಸುತ್ತಿದ್ದು, ಅನಕ್ಷರತೆ, ವಲಸೆ, ನಿರುದ್ಯೋಗ, ಹೀಗೆ ಹಲವು ಸಮಸ್ಯೆಗಳಿಂದ ಜರ್ಜರಿತರಾಗಿದ್ದಾರೆ. ಈ ಸಮುದಾಯದ ಅಭಿವೃದ್ದಿಗಾಗಿ ಹಾಗೂ ಜನಾಂಗದ ಕೂಗನ್ನು ಲೋಕಸಭೆಯಲ್ಲಿ ಮೊಳಗಿಸಲು, ಹಕ್ಕೊತ್ತಾಯ ಮಂಡಿಸಲು ಪ್ರಾತಿನಿಧ್ಯ ಅವಶ್ಯಕವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News