ಲಂಕಾದಲ್ಲಿ ವೀಸಾ ನಿಯಮ ಉಲ್ಲಂಘನೆ: 73 ಭಾರತೀಯರ ಬಂಧನ

Update: 2019-02-03 15:14 GMT

ಕೊಲಂಬೊ, ಫೆ. 3: ಈ ವರ್ಷ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಶ್ರೀಲಂಕಾದ ಅಧಿಕಾರಿಗಳು 73 ಭಾರತೀಯರನ್ನು ಬಂಧಿಸಿದ್ದಾರೆ.

ಕೊಲಂಬೊದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಮಟುಗಮದಲ್ಲಿರುವ ಕಾರ್ಖಾನೆಯೊಂದರಿಂದ ಶನಿವಾರ ಒಟ್ಟು 49 ಭಾರತೀಯರನ್ನು ಬಂಧಿಸಲಾಯಿತು ಎಂದು ವಲಸೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಈ ಕಾರ್ಮಿಕರು ತಮ್ಮ ವೀಸಾಗಳ ಅವಧಿಯನ್ನು ಮೀರಿ ದೇಶದಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು, ತಮ್ಮ ವೀಸಾ ಅವಧಿ ಮೀರಿ ಶ್ರೀಲಂಕಾದಲ್ಲಿ ಉಳಿದಿದ್ದ 24 ಭಾರತೀಯರನ್ನು ಬಂಧಿಸಲಾಗಿತ್ತು. ಅವರು ಇಂಗಿರಿಯ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಗತ್ಯ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಬಂಧಿತರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News