×
Ad

ಬೆಂಗಳೂರು: ವೈಟ್ ಟಾಂಪಿಗ್ ರಸ್ತೆ ಮಾಹಿತಿ ಪಡೆದ ಢಾಕಾ ಮೇಯರ್

Update: 2019-02-04 21:59 IST

ಬೆಂಗಳೂರು, ಫೆ.3: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಢಾಕಾ ಮೇಯರ್ ಮುಹಮ್ಮದ್ ಸಯೀದ್ ಖೋಕಾನ್‌ರವರ ನೇತೃತ್ವದ ನಿಯೋಗ ನಗರದಲ್ಲಿ ಕೈಗೊಂಡಿರುವ ವೈಟ್ ಟಾಂಪಿಗ್ ಟೆಂಡರ್ ಶ್ಯೂರ್ ರಸ್ತೆಗಳ ಬಗ್ಗೆ ಮಾಹಿತಿಯನ್ನು ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರಕ್ಕೆ ಭೇಟಿ ನೀಡಿದ ಢಾಕಾದ ದಕ್ಷಿಣ ನಗರ ಕಾರ್ಪೋರೇಷನ್‌ನ ಮೇಯರ್ ಮುಹಮ್ಮದ್ ಸಯೀದ್ ಖೋಖಾನ್ ಅವರ ನೇತೃತ್ವ ನಿಯೋಗ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರನ್ನು ಭೇಟಿ ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ, ವೈಟ್ ಟಾಂಪಿಗ್ ಟೆಂಡರ್ ಶ್ಯೂರ್ ರಸ್ತೆಗಳ ಮಾಹಿತಿಯನ್ನು ಪಡೆದುಕೊಂಡರು.

ನಗರದಲ್ಲಿ ಸುಗಮ ರಸ್ತೆ ಸಂಚಾರಕ್ಕೆ ಬಿಬಿಎಂಪಿ ವತಿಯಿಂದಲೇ ಮೇಲು ಸೇತುವೆ, ಕೆಳ ಸೇತುವೆ ಅಲ್ಲದೆ ಸ್ಕೈವಾಕ್‌ಗಳ ನಿರ್ಮಾಣ ಮತ್ತಿತರರ ಮೂಲಭೂತ ಸೌಕರ್ಯಗಳ ಬಗ್ಗೆಯೂ ನಿಯೋಗಕ್ಕೆ ಮನದಟ್ಟು ಮಾಡಿಕೊಟ್ಟರು. ಭವಿಷ್ಯದಲ್ಲಿ ನಗರವನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕೈಗೆತ್ತಿಕೊಂಡಿರುವ ಹಲವು ಕಾಮಗಾರಿಗಳ ಬಗ್ಗೆಯೂ ಮೇಯರ್ ಅವರು ವಿವರಿಸಿದರು.

ನಂತರ ಢಾಕಾ ಮೇಯರ್ ಮುಹಮ್ಮದ್ ಸಯೀದ್ ಖೋಕಾನ್ ಅವರು ನಗರದಲ್ಲಿ ಪೂರ್ಣಗೊಂಡಿರುವ ಹಾಗೂ ಪಾಲಿಕೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಟೆಂಡರ್ ಶ್ಯೂರ್ ರಸ್ತೆಗಳು, ಮೇಲ್ಸುತೇವೆ ರಾಜಕಾಲುವೆಗಳ ಅಭಿವೃದ್ಧಿ, ರಸ್ತೆ ಅಗಲೀಕರಣ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News