ಸಿದ್ದಗಂಗಾ ಶ್ರೀಗಳಲ್ಲಿ ಅಪಾರ ಜ್ಞಾಪಕ ಶಕ್ತಿ ಇತ್ತು: ತುಷಾರ್ ಗಿರಿನಾಥ್

Update: 2019-02-04 17:06 GMT

ಬೆಂಗಳೂರು, ಜ.4: ಸಿದ್ಧಗಂಗಾ ಮಠದ ಶ್ರೀಶಿವಕುಮಾರ್ ಶ್ರೀಗಳು ಮಕ್ಕಳು ವಿದ್ಯಾಭ್ಯಾಸ ಮಾಡುವ ಕೊಠಡಿ, ಊಟ ಮಾಡುವ ಸ್ಥಳ ಹಾಗೂ ಅಡುಗೆ ಮನೆಗಳಿಗೆ ಹೋಗಿ ಖುದ್ದು ಪರಿಶೀಲಿಸುತ್ತಿದ್ದರು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸೋಮವಾರ ಕಾವೇರಿ ಭವನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಡಾ.ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಶಿವಕುಮಾರ್ ಶ್ರೀಗಳು ದೇಶದ ಎಲ್ಲ ರಾಜ್ಯಗಳ ಮಾಹಿತಿಯನ್ನು ಹೊಂದಿದ್ದು, ನಾನು ಮಠಕ್ಕೆ ಭೇಟಿ ನೀಡಿದಾಗ ನನ್ನ ರಾಜ್ಯವಾದ ಉತ್ತರ ಪ್ರದೇಶದ ಬಗ್ಗೆಯೂ ವಿಚಾರಿಸಿ ಅಲ್ಲಿಯ ಮಳೆ, ಬೆಳೆಯ ಬಗ್ಗೆ ಮಾಹಿತಿ ಪಡೆದರು ಎಂದು ಹೇಳಿದರು.

ಮುಖ್ಯ ಲೆಕ್ಕಾಧಿಕಾರಿ ರವಿ ಕಮಲಾಪುರ್‌ಕರ್ ಮಾತನಾಡಿ, ಶಿವಕುಮಾರಶ್ರೀಗಳು ಉತ್ತರದಲ್ಲಿ ಗಂಗಾ ನದಿ ಹೇಗೆ ಪುಣ್ಯ ಸ್ಥಳವೋ ಹಾಗೆಯೇ ದಕ್ಷಿಣದಲ್ಲಿ ತುಮಕೂರಿನ ಸಿದ್ಧಗಂಗೆ ಸಹ ಅಷ್ಟೇ ಪುಣ್ಯ ಸ್ಥಳ ಎಂದು ಹೇಳುತ್ತಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಬೇಲೀಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀ, ಜಲಮಂಡಳಿ ಪ್ರದಾನ ಮುಖ್ಯ ಅಭಿಯಂತರ ಡಾ.ಕೆಂಪರಾಮಯ್ಯ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News