×
Ad

ಸರಕಾರಗಳು ಜನಾಭಿಪ್ರಾಯ ಪಡೆದು ಕಾನೂನು ರಚಿಸಲಿ: ಪ್ರಕಾಶ್ ರೈ

Update: 2019-02-05 22:21 IST

ಬೆಂಗಳೂರು, ಫೆ.5: ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಜನಾಭಿಪ್ರಾಯವನ್ನು ಪಡೆದು ಕಾನೂನು ರಚಿಸಬೇಕು. ಆದರೆ, ಈ ಯಾವ ಸರಕಾರಗಳೂ ಜನಾಭಿಪ್ರಾಯವನ್ನು ಪಡೆದು ಕಾನೂನು ರಚಿಸುತ್ತಿಲ್ಲ ಎಂದು ನಟ, ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸುತ್ತಿರುವ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಎಐಡಿವೈಒ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಇದು ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಇರುವ ವ್ಯವಸ್ಥೆ. ಅವರ ಆಶೋತ್ತರಗಳನ್ನು ಎತ್ತಿ ಹಿಡಿಯಬೇಕು. ಅಲ್ಲದೆ, ಕಾನೂನು ರಚಿಸುವಾಗ ಜನರ ಸಲಹೆ ಪಡೆದುಕೊಂಡು ರಚಿಸಬೇಕೆಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News