ಮೊದಲ ಟ್ವೆಂಟಿ-20: ಭಾರತದ ಗೆಲುವಿಗೆ 220 ರನ್ ಸವಾಲು

Update: 2019-02-06 09:18 GMT

ವೆಲ್ಲಿಂಗ್ಟನ್ , ಫೆ.6: ಇಲ್ಲಿ ನಡೆಯುತ್ತಿರುವ  ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಗೆಲುವಿಗೆ 220 ರನ್ ಗಳ ಸವಾಲು ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ನ್ಯೂಝಿಲೆಂಡ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 219 ರನ್ ಗಳಿಸಿದೆ.

ಆರಂಭಿಕ ದಾಂಡಿಗ  ಹಾಗೂ ವಿಕೆಟ್ ಕೀಪರ್ ಟಿಮ್ ಸೀಫರ್ಟ್ 84 ರನ್ (43ಎ, 7ಬೌ,6ಸಿ), ಕಾಲಿನ್ ಮುನ್ರೊ 34ರನ್, ನಾಯಕ ಕೇನ್ ವಿಲಿಯಮ್ಸನ್ 34ರನ್, ರಾಸ್ ಟೇಲರ್ 23 ರನ್, ಸ್ಕಾಟ್ ಕುಗ್ಗೆಲೆಜಿನ್ ಔಟಾಗದೆ 20 ರನ್ , ಡಾರಿಲ್ ಮಿಚೆಲ್ 8, ಮಿಚೆಲ್ ಸಾಂಟ್ನೆರ್  ಔಟಾಗದೆ 7ರನ್, ಕಾಲಿನ್ಡೆ ಗ್ರ್ಯಾಂಡ್ ಹೊಮ್ಮೆ 3ರನ್  ಗಳಿಸಿದರು.

ಭಾರತದ ಹಾರ್ದಿಕ್ ಪಾಂಡ್ಯ 51ಕ್ಕೆ 2, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ , ಕೃನಾಲ್ ಪಾಂಡ್ಯ, ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News