ರಾಜ್ಯದಲ್ಲಿ ಆನೆ ಬೇಟೆ ಜೀವಂತ ?
Update: 2019-02-06 22:31 IST
ಬೆಂಗಳೂರು, ಫೆ.6: ಆನೆಯೊಂದನ್ನು ದುಷ್ಕರ್ಮಿಗಳು, ಬೇಟೆಯಾಡಿ, ಅದರ ದಂತ ಕಳವು ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಆನೆ ಬೇಟೆ ಜೀವಂತ ಇದೆಯೇ ಎಂಬ ಪ್ರಶ್ನೆ ಎದ್ದಿದೆ.
ಕಾವೇರಿ ವನ್ಯಜೀವಿ ವಿಭಾಗದ ಕೊತ್ತನೂರು ವಲಯದಲ್ಲಿ ಫೆ.3 ರಂದು ಕೊಳೆತ ಸ್ಥಿತಿಯಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ ಎನ್ನಲಾಗಿದೆ.
ಚಿಕ್ಕಲ್ಲೂರಿನ 12ನೆ ಕಂಪಾರ್ಟ್‌ಮೆಂಟಿನ ಹುಲಿಕೊಡಿಸಿದ ಹಳ್ಳ ಎಂಬ ಅರಣ್ಯ ಪ್ರದೇಶದಲ್ಲಿ ಗಂಡಾನೆಯನ್ನ ಬೇಟೆಯಾಡಲಾಗಿದೆ. ಸುಮಾರು ಒಂದು ತಿಂಗಳ ಹಿಂದೆಯೇ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ ಅರಣ್ಯಾಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಬೇಟೆಯಾಡಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.