ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಶಿವಮೊಗ್ಗದಲ್ಲಿ ಪತ್ತೆ

Update: 2019-02-07 14:43 GMT

ಬೆಂಗಳೂರು, ಫೆ.7: ನಗರದ ಕುಂಬಳಗೋಡಿನಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಕುಂಬಳಗೋಡುವಿನ ಬಿಎಸ್ ಪಾಳ್ಯದ 8ನೆ ತರಗತಿಯ ರೋಹನ್ ಮತ್ತು 5ನೇ ತರಗತಿಯ ಮಿಥುನ್ ಬುಧವಾರ ಮುಂಜಾನೆ 2ರ ವೇಳೆ ಮನೆಯಲ್ಲಿದ್ದ ಸ್ಕೂಟಿ ಸ್ಕೂಟರ್ ತೆಗೆದುಕೊಂಡು ಹೊರಟಿದ್ದು, ಹಿಂದುರಿಗಿ ಮನೆಗೆ ಬಂದಿರಲಿಲ್ಲ. ಹೀಗಾಗಿ, ಬೆಳಗ್ಗೆ ಬಾಲಕರು ನಾಪತ್ತೆಯಾಗಿರುವುದನ್ನು ಕಂಡು ಪೋಷಕರು ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಸ್ಕೂಟರ್ ತೆಗೆದುಕೊಂಡು ಹೋಗಿದ್ದ ಬಾಲಕರು ಅದನ್ನು ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಬಿಟ್ಟಿರುವುದು ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಂಬಳಗೋಡು ಪೊಲೀಸರು, ಕೆಂಗೇರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಇಬ್ಬರು ಬಾಲಕರು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿರುವುದು ಗೊತ್ತಾಗಿದೆ. ಬಾಲಕರು ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಇಳಿದು ಹೋಗುತ್ತಿರುವ ದೃಶ್ಯ ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಮೈಸೂರಿನಿಂದ ನೇರವಾಗಿ ಶಿವಮೊಗ್ಗ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದರು. ಈ ಮಾಹಿತಿ ಗೊತ್ತಾಗಿ ರೈಲ್ವೆ ಪೊಲೀಸರು ಬಾಲಕರಿಬ್ಬರನ್ನು ಹಿಡಿದು ಪೋಷಕರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News