ರಾಜ್ಯದ ಆಂತರಿಕ ಉತ್ಪನ್ನ ಶೇ.9.6ರಷ್ಟು ಬೆಳವಣಿಗೆ: ಎಚ್.ಡಿ.ಕುಮಾರಸ್ವಾಮಿ

Update: 2019-02-08 16:18 GMT

ಬೆಂಗಳೂರು, ಫೆ.8: ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು 2018-19ನೆ ಸಾಲಿನಲ್ಲಿ ಶೇ.9.6ರಷ್ಟು ಬೆಳವಣಿಗೆಯಾಗುವುದೆಂದು ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ 2019-20ನೆ ಸಾಲಿನ ಆಯವ್ಯಯ ಮಂಡಿಸಿದ ಅವರು, ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಬರ ಪರಿಸ್ಥಿತಿಯಿಂದ ಕೃಷಿ ವಲಯದಲ್ಲಿ ಶೇ.4.8ರ ಋಣಾತ್ಮಕ ಬೆಳವಣಿಗೆ ಆಗಬಹುದು. ಆದ್ದರಿಂದ ರಾಜ್ಯದ ಆಂತರಿಕ ಉತ್ಪನ್ನದ ಬೆಳವಣಿಗೆ ದರದಲ್ಲಿ ಸ್ವಲ್ಪ ಮಟ್ಟದ ಕುಸಿತ ನಿರೀಕ್ಷಿಸಲಾಗಿದೆ ಎಂದರು.

ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಉತ್ಪನ್ನವು 2017-18ನೆ ಸಾಲಿನಲ್ಲಿ ಇದ್ದ ಶೇ.4.7 ಮತ್ತು ಶೇ.12.2ರಷ್ಟರ ಬೆಳವಣಿಗೆಗೆ ಹೋಲಿಸಿದ್ದಲ್ಲಿ, 2018-19ರ ಸಾಲಿಗೆ ಕ್ರಮವಾಗಿ ಶೇ.7.4 ಮತ್ತು ಶೇ.12.3ರಷ್ಟು ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News