ಸಾರಿಗೆ-ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲಕರ ಬಜೆಟ್: ಕೆ.ರಾಧಾಕೃಷ್ಣ ಹೊಳ್ಳ

Update: 2019-02-08 16:24 GMT

ಬೆಂಗಳೂರು, ಫೆ.8: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದವರಿಗೆ ತುಂಬಾ ಅನುಕೂಲಕರ ವಾಗಿದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಾಲಕರಿಗೆ ಆಸರೆ ಒದಗಿಸುವ ಸಲುವಾಗಿ ‘ಸಾರಥಿ ಸೂರು’ ಹೆಸರಿನ ಬಾಡಿಗೆ ವಸತಿ ಯೋಜನೆಗೆ 50 ಕೋಟಿ ರೂ. ಘೋಷಿಸಿದ್ದಾರೆ. ಆಟೋ-ಟ್ಯಾಕ್ಸಿ ಚಾಲಕರ ವೈದ್ಯಕೀಯ ನೆರವಿಗಾಗಿ ಗುಂಪು ವಿಮೆಗೆ 30 ಕೋಟಿ ರೂ.ಘೋಷಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ರಾಜಧಾನಿಯ ಅಭಿವೃದ್ಧಿಗೆ ನವ ಬೆಂಗಳೂರು ಕ್ರಿಯಾ ಯೋಜನೆ ರೂಪಿಸಿ ಅದಕ್ಕೆ 2,300 ಕೋಟಿ ರೂ. ಮಂಜೂರು ಮಾಡಿದ್ದಾರೆ.

ಮಾತ್ರವಲ್ಲದೆ 10 ಸಾವಿರ ವಾಹನಗಳ ನಿಲುಗಡೆಗಾಗಿ ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯ ಹಾಗೂ ನಮ್ಮ ಬಹುಮುಖ್ಯ ಬೇಡಿಕೆಯಂತೆ ನಗರದಲ್ಲಿ ಎಲಿವೇಟೆಡ್ ಕಾರಿಡಾರಿಗಾಗಿ 1 ಸಾವಿರ ಕೋಟಿ ರೂ. ಮೀಸಲಿಟ್ಟು ಚಾಲಕರ ಮತ್ತು ನಗರದಲ್ಲಿನ ವಾಹನ ದಟ್ಟಣೆಯನ್ನು ನೀಗಿಸಲು ಪ್ರಯತ್ನ ಮಾಡಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತರ್‌ರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ಕ್ಕಾಗಿ 2 ಕೋಟಿ ರೂ.ಘೋಷಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಸೋದ್ಯಮಿಗಳು, ವಾಣಿಜ್ಯ ವಾಹನ ಮಾಲಕರು ಮತ್ತು ಚಾಲಕರ ನಿರೀಕ್ಷೆ ಹುಸಿಯಾಗದಂತೆ ಅನುಕೂಲಕರ ಬಜೆಟ್ ಮಂಡಿಸಿ ಮುಖ್ಯಮಂತ್ರಿ ಚಾಲಕ-ಮಾಲಕರ ಸ್ನೇಹಿ ಎಂಬುದನ್ನು ನಿರೂಪಿಸಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News