ವಸಂತಿ ಟೀಚರ್

Update: 2019-02-08 17:50 GMT

ಪಡುಬಿದ್ರಿ, ಫೆ. 8: ಬಿಲ್ಲವ ಸಮಾಜದ ಹಿರಿಯ ಮಹಿಳೆ, ದಿ. ದಾಸು ಬಲ್ಚಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ವಸಂತಿ ಟೀಚರ್ (79) ಅಸೌಖ್ಯದಿಂದ ಶುಕ್ರವಾರ ನಿಧನ ಹೊಂದಿದರು.

ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 38ವರ್ಷಗಳ ಕಾಲ, ಬೆಳ್ತಂಗಡಿ, ಸಾಂತೂರು ಕೊಪ್ಲ, ಪಡುಬಿದ್ರಿ ಮತ್ತು ಹೆಜಮಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಹೆಜಮಾಡಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದರು.

ಪಡುಬಿದ್ರಿಯ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಬಿಲ್ಲವ ಸಮಾಜದಲ್ಲಿ ಸಕ್ರಿಯವಾಗಿ, ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಭಜನ ಮಂಡಳಿಯನ್ನು ಕಟ್ಟಿ ಬೆಳೆಸಿದವರಾಗಿದ್ದರು. ನವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ, ನವಶಕ್ತಿ ಮಹಿಳಾ ವೆಲ್‍ಫೇರ್ ಸೊಸೈಟಿಯ ನಿರ್ದೇಶಕಿ ಯಾಗಿ, ನವಶಕ್ತಿ ಭಜನಾ ಮಂಡಳಿಯ ಸಕ್ರಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದ ಇವರು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ