ಬೆಂಗಳೂರಿನ ಈ ಮುಖ್ಯ ರಸ್ತೆಯಲ್ಲಿ ಎಂಟು ತಿಂಗಳು ವಾಹನ ಸಂಚಾರ ನಿಷೇಧ !

Update: 2019-02-09 16:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.9: ನಗರದ ಕಾಟನ್‌ಪೇಟೆ ಮುಖ್ಯ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು ಎಂಟು ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಒಳಚರಂಡಿ ಕೊಳವೆ ಅಳವಡಿಕೆ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ಆರಂಭವಾಗಲಿದ್ದು, ಸುಮಾರು 8 ತಿಂಗಳ ಕಾಲ ವಾಹನ ಸಂಚಾರಕ್ಕೆ ಅವಕಾಶವಿಲ್ಲದಂತಾಗುತ್ತದೆ. ಗೂಡ್ಸ್ ಶೆಡ್ ರಸ್ತೆಯ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ 1.5 ಕಿ.ಮೀ ಉದ್ದದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರಕಿದ್ದು, ಶುಕ್ರವಾರದಿಂದಲೇ ಕೆಲಸ ಆರಂಭವಾಗಿದೆ.

ಬಿಬಿಎಂಪಿಯ 11.71 ಕೋಟಿ ರೂ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಗೂಡ್ಸ್ ಶೆಡ್ ರಸ್ತೆಯ ಜಂಕ್ಷನ್‌ನಿಂದ ಮೈಸೂರು ರಸ್ತೆಯವರೆಗೆ 600 ಮಿ.ಮೀ ವ್ಯಾಸದ ಒಳಚರಂಡಿ ಕೊಳವೆಯು ರಸ್ತೆ ಮಧ್ಯಭಾಗದಲ್ಲಿಯೇ ಹಾದು ಹೋಗಲಿದ್ದು, ಇದಕ್ಕಾಗಿ 30 ಲಕ್ಷ ರೂ. ವೆಚ್ಚಮಾಡಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ 300 ಮಿ.ಮೀ ವ್ಯಾಸದ ಒಳಚರಂಡಿ ಕೊಳವೆ ಮತ್ತು 150 ಮಿ.ಮೀ ವ್ಯಾಸದ ಕುಡಿಯುವ ನೀರಿನ ಕೊಳವೆ, ಬೆಸ್ಕಾಂ, ಒಎಫ್‌ಸಿ ಕೇಬಲ್‌ಗಳಿಗೆ ಡಟ್, ಮಳೆ ನೀರಿಗಾಗಿ 900 ಮಿ.ಮೀ ವ್ಯಾಸದ ಕೊಳವೆಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯುದ್ದಕ್ಕೂ ಎಲ್ಇಡಿ ದೀಪಗಳನ್ನು ಹಾಕಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News