×
Ad

ಯಡಿಯೂರಪ್ಪ- ಶರಣಗೌಡರ ಮಾತುಕತೆ ನಿಜ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Update: 2019-02-10 19:44 IST

ಬೆಂಗಳೂರು, ಫೆ.10: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶರಣಗೌಡರೊಂದಿಗೆ ಮಾತುಕತೆ ನಡೆಸಿದ್ದು ನಿಜ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಆಡಿಯೋದಲ್ಲಿರುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕಟ್ಟುಕಥೆ ಎನ್ನುವುದನ್ನು ಯಡಿಯೂರಪ್ಪ ಸ್ಪಷ್ಟಪಡಿಸಿ, ಶರಣಗೌಡರನ್ನು ಭೇಟಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮಧ್ಯರಾತ್ರಿ ಶರಣಗೌಡರವರನ್ನು ಯಡಿಯೂರಪ್ಪರವರ ಬಳಿ ಕಳಿಸುವ ಸಂಚು ರೂಪಿಸಿದವರೇ ಕುಮಾರಸ್ವಾಮಿ ಎಂದು ಆರೋಪಿಸಿದರು.

ದೇಶದ ರಾಜಕೀಯ ಇತಿಹಾಸದಲ್ಲೇ ಹೀಗೆ ಮಧ್ಯರಾತ್ರಿ ತಮ್ಮ ರಾಜಕೀಯ ವಿರೋಧಿಯನ್ನು ಬ್ಲಾಕ್ ಮೇಲ್‌ ಮಾಡಲು ರಾಜ್ಯದ ಮುಖ್ಯಮಂತ್ರಿಯೊಬ್ಬರು ನಕಲಿ ಆಡಿಯೋಗೆ ಶರಣಾದ ನಿದರ್ಶನವಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ಎನ್.ರವಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News