ರಫೇಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ಅನಿಲ್ ಅಂಬಾನಿಯ ಮಧ್ಯವರ್ತಿ: ರಾಹುಲ್ ಗಾಂಧಿ

Update: 2019-02-12 09:24 GMT

ಹೊಸದಿಲ್ಲಿ, ಫೆ.12: ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಯಮಿ ಅನಿಲ್ ಅಂಬಾನಿಯವರ ಮಧ್ಯವರ್ತಿಯಂತೆ ವರ್ತಿಸುತ್ತಿದ್ದಾರೆ. ಪ್ರಧಾನಿ ಭ್ರಷ್ಟಾಚಾರ ವ್ಯಕ್ತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದರು.

  ಪ್ರಧಾನಮಂತ್ರಿ ಮೋದಿ ಫ್ರಾನ್ಸ್‌ನಿಂದ 36 ರಫೇಲ್ ಯುದ್ದ ವಿಮಾನ ಖರೀದಿಯ ಬಗ್ಗೆ ಘೋಷಣೆ ಮಾಡುವ ಮೊದಲು ಅನಿಲ್ ಅಂಬಾನಿ ಅವರು ಫ್ರಾನ್ಸ್‌ನ ರಕ್ಷಣಾ ಅಧಿಕಾರಿಗಳನ್ನು ಭೇಟಿಯಾಗಿದ್ದರು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿರುವ ಹಿನ್ನೆಲೆಯಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ. ರಫೇಲ್ ಒಪ್ಪಂದಕ್ಕೆ ಅಂಕಿತ ಹಾಕುವ ವಿಚಾರ 10 ದಿನಗಳ ಮೊದಲೇ ಅನಿಲ್ ಅಂಬಾನಿಗೆ ಗೊತ್ತಿತ್ತು ಎಂದು ಆರೋಪಿಸಿದ ರಾಹುಲ್, ‘‘ಪ್ರಧಾನಿ ಮೋದಿ ಅವರು ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಅವರು(ಪ್ರಧಾನಿ)ರಕ್ಷಣಾ ವಿಚಾರ(ರಫೇಲ್ ಒಪ್ಪಂದ)ಯಿರುವ ಮಾಹಿತಿವನ್ನು ಯಾರಿಗೋ ಹೇಳುತ್ತಿದ್ದಾರೆ. ಅವರು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ರಕ್ಷಣಾ ಮಾಹಿತಿಯನ್ನು ಯಾರಿಗೋ ನೀಡಿದ್ದಾರೆ ಎಂದು ಆರೋಪಿಸಿದರು.

ವಿಶ್ವದ ಅತ್ಯಂತ ದೊಡ್ಡ ರಕ್ಷಣಾ ಒಪ್ಪಂದದ ಬಗ್ಗೆ ಅನಿಲ್ ಅಂಬಾನಿಗೆ ಗೊತ್ತಿತ್ತು. ಆದರೆ, ಈ ವಿಚಾರ ರಕ್ಷಣಾ ಸಚಿವರು ಹಾಗೂ ವಿದೇಶಿ ಕಾರ್ಯದರ್ಶಿಗೂ ಗೊತ್ತಿರಲಿಲ್ಲ. ಇದಕ್ಕೆ ಪ್ರಧಾನಮಂತ್ರಿಗಳೆ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ರಫೇಲ್ ಒಪ್ಪಂದವನ್ನು ಘೋಷಿಸುವ 15 ದಿನಗಳ ಮೊದಲು 2015ರ ಮಾರ್ಚ್‌ನ ನಾಲ್ಕನೇ ವಾರ ಅನಿಲ್ ಅಂಬಾನಿ ಅವರು ಆಗಿನ ಫ್ರಾನ್ಸ್ ರಕ್ಷಣಾ ಸಚಿವ ಜೀನ್ ವೆಸ್ ಡ್ರಿಯನ್ಸ್‌ರನ್ನು ಪ್ಯಾರಿಸ್ ಕಚೇರಿಯಲ್ಲಿ ಭೇಟಿಯಾಗಿದ್ದರು. ಅಲ್ಲಿ ಉನ್ನತ ಸಲಹೆಗಾರರ ಜೊತೆ ಸಭೆ ನಡೆಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News