ಕೆ.ಅಬೂಸ್ವಾಲಿಹ್
Update: 2019-02-14 19:50 IST
ಹಳೆಯಂಗಡಿ,ಫೆ.14: ಇಲ್ಲಿನ ಮೂಡುತೋಟ ಮನೆಯ ಕೆ.ಅಬೂಸ್ವಾಲಿಹ್( 86) ಅವರು ಇಂದು ಮಂಗಳೂರಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಮೃತರು ರಾಜ್ಯ ಸರಕಾರದ ಜಿಲ್ಲಾ ಆಡಿಟರ್ ಆಗಿದ್ದು, ಪುತ್ತೂರು, ಕಾರ್ಕಳ ಮತ್ತು ಬಂಟ್ವಾಳದಲ್ಲಿ ಟಿಎಪಿಸಿಎಂ ಸೊಸೈಟಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪುತ್ತೂರಿನಲ್ಲಿ ಅವರು ಆರಂಭಿಸಿದ ಮಿನಿ ಜನತಾ ಬಜಾರ್ ಸಹಕಾರಿ ವಲಯದಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾಗಿ ಹೆಸರು ಪಡೆದಿತ್ತು.