ದನಿಯಿಲ್ಲದವರ ದನಿ ಜಾರ್ಜ್ ಫರ್ನಾಂಡಿಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-02-14 16:23 GMT

ಬೆಂಗಳೂರು, ಫೆ.14: ನ್ಯಾಯದಿಂದ ವಂಚಿತರಾದವರ ಪರವಾಗಿ ನಿಲ್ಲುತ್ತಿದ್ದ ಜಾರ್ಜ್ ಫರ್ನಾಂ  ಡಿಸ್ ದನಿಯಿಲ್ಲದವರ ದನಿಯಾಗಿ ಅನ್ಯಾಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದ ಶಾಸಕರ ಭವನದಲ್ಲಿ ಜಾರ್ಜ್ ಫರ್ನಾಂಡಿಸ್ ಅಭಿಮಾನಿ ಬಳಗ ಆಯೋಜಿಸಿದ್ದ ಜಾರ್ಜ್ ಫರ್ನಾಂಡಿಸ್‌ರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ರತಿಮ ಹೋರಾಟಗಾರ, ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದ ಅಪರೂಪದ ರಾಜಕಾರಣಿ ಫರ್ನಾಂಡಿಸ್ ಸದಾ ಜನಪರ ಚಿಂತನೆ ಮಾಡುತ್ತಿದ್ದರು. ಯಾರೂ ಕೂಡ ಅವರಿಗೆ ಸಾಟಿ ಆಗುವುದಿಲ್ಲ ಎಂದು ಹೇಳಿದರು.

ಇಡೀ ದೇಶದ ಕಾರ್ಮಿಕ ವರ್ಗ ನೆನಪಿಸಿಕೊಳ್ಳಬೇಕಾದ ಮಹಾನ್ ವ್ಯಕ್ತಿಯಾಗಿದರು. 1974 ರಲ್ಲಿ ರೈಲ್ವೆ ಚಳವಳಿ ನಡೆಸುವ ಮೂಲಕ ಹೊಸ ಭಾಷ್ಯವನ್ನು ಬರೆಯುತ್ತಾರೆ. ಅಲ್ಲದೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭೂಗತರಾಗಿ ನೆಲೆಸಿರುತ್ತಾರೆ. ಇಷ್ಟೆಲ್ಲ ಹೋರಾಟ ಮಾಡಿದರೂ, ಬರೋಡಾ ಡೈನಮೈಟ್ ಪ್ರಕರಣದಲ್ಲಿ ಕುಟುಂಬಕ್ಕೆ ಭಾರೀ ಸಮಸ್ಯೆಯನ್ನು ನೀಡಲಾಗುತ್ತದೆ ಎಂದರು.

ಅಪಾರವಾದ ನಾಯಕತ್ವ ಗುಣ ಅವರಲ್ಲಿ ಇತ್ತು. ಪ್ರಚಂಡ ಭಾಷಣಕಾರರಾಗಿದ್ದ ಅವರು, ಪ್ರಾಮಾಣಿಕತೆಯಿಂದ ಸರಳ ಜೀವನ ನಡೆಸುತ್ತಿದ್ದರು. ದೇಶದ ಉದ್ದಗಲಕ್ಕೂ ಸುತ್ತುವ ರಾಜಕಾರಣಿಯಾಗಿ ಜನರ ಸಮಸ್ಯೆಗಳಿಗೆ ಕಿವಿ ಕೊಡುತ್ತಿದ್ದರು. ಅಷ್ಟೆಲ್ಲ ಮಾಡಿದ ವ್ಯಕ್ತಿಯ ಮೇಲೆ ಆರೋಪ ಬಂದಿದ್ದು ಬೇಸರದ ಸಂಗಾತಿ ಎಂದು ವಿಷಾದ ವ್ಯಕ್ತಪಡಿಸಿದರು.

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಸಹೋದರ ಮೈಕಲ್ ಫರ್ನಾಂಡಿಸ್, ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಆಂಜನೇಯ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಉಪಸ್ಥಿತರಿದ್ದರು.

ಶೇ.99 ಅನ್ಯ ಮಾರ್ಗದ ಮೂಲಕ ರಾಜಕೀಯಕ್ಕೆ ಬರುವವರಿಗೆ ಅವಕಾಶ ಸಿಗುತ್ತಿದೆ. ಹೋರಾಟದ ಮೂಲಕ ಸೀದಾ ಹೋಗಿ ವಿಧಾನ ಸೌಧ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಾಧುಸ್ವಾಮಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News